ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LSPolls: ನವೀನ್ ಜಿಂದಾಲ್, ಪತ್ನಿ ಬಳಿ ₹1,000 ಕೋಟಿ ಮೌಲ್ಯದ ಆಸ್ತಿ

Published 2 ಮೇ 2024, 14:24 IST
Last Updated 2 ಮೇ 2024, 14:24 IST
ಅಕ್ಷರ ಗಾತ್ರ

ಚಂಡೀಗಢ: ಹರಿಯಾಣದ ಕುರುಕ್ಷೇತ್ರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಾಗಿರುವ ಉದ್ಯಮಿ ನವೀನ್ ಜಿಂದಾಲ್, ಗುರುವಾರ ನಾಮಪತ್ರ ಸಲ್ಲಿಸಿದ್ದು, ತಮ್ಮ ಮತ್ತು ತಮ್ಮ ಪತ್ನಿಯ ಆಸ್ತಿ ವಿವರವನ್ನು ಘೋಷಿಸಿದ್ದಾರೆ.

ತಮ್ಮ ಮತ್ತು ಪತ್ನಿ ಶಲ್ಲು ಅವರ ಸ್ಥಿರ ಮತ್ತು ಚರಾಸ್ತಿ ಮೌಲ್ಯ ₹1,000 ಕೋಟಿ ಎಂದು ಅವರು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.

ಜಿಂದಾಲ್ ಸ್ಟೀಲ್ ಅಂಡ್ ಪವರ್ ಲಿಮಿಟೇಡ್‌ನ ಛೇರ್ಮನ್ ಆಗಿರುವ ನವೀನ್ ಜಿಂದಾಲ್ ನಾಮಪತ್ರ ಸಲ್ಲಿಕೆ ವೇಳೆ ಮುಖ್ಯಮಂತ್ರಿ ನಯಾಬ್ ಸಿಂಗ್ ಜೊತೆಗಿದ್ದರು.

ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿ ಎಂಬಿಎ ಪದವಿ ಪಡೆದಿರುವ ಜಿಂದಾಲ್, ತಮ್ಮ ಮತ್ತು ಪತ್ನಿ ಬಳಿ ₹40 ಕೋಟಿ ಮೌಲ್ಯದ ಚಿನ್ನ ಮತ್ತು ಇತರೆ ಆಭರಣಗಳು ಇವೆ ಎಂದು ಮಾಹಿತಿ ನೀಡಿದ್ದಾರೆ.

ತಮ್ಮ ಚರಾಸ್ತಿ ಸುಮಾರು ₹886 ಕೋಟಿಯಷ್ಟಿದ್ದು, ಪತ್ನಿಯ ಬಳಿ ಇರುವ ಚರಾಸ್ತಿ ಸುಮಾರು ₹114 ಕೋಟಿ ಮೌಲ್ಯದ್ದಾಗಿದೆ ಎಂದು ಘೋಷಿಸಿದ್ದಾರೆ.

ಉತ್ತರ ಪ್ರದೇಶದ ದಾದ್ರಿಯಲ್ಲಿ 1.628 ಹೆಕ್ಟೇರ್ ಕೃಷಿ ಭೂಮಿ ಇದ್ದು, ಕೃಷಿಯೇತರ ಭೂಮಿ 5,058 ಚದರ ಅಡಿ ಇದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT