ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇತಾಜಿ ಭಾರತದ ಮೊದಲ ಪ್ರಧಾನಿ: ಕಂಗನಾ ಹೇಳಿಕೆ ಸಮರ್ಥಿಸಿಕೊಂಡ ಹಿಮಂತ

Published 5 ಏಪ್ರಿಲ್ 2024, 14:51 IST
Last Updated 5 ಏಪ್ರಿಲ್ 2024, 14:51 IST
ಅಕ್ಷರ ಗಾತ್ರ

ಗುವಾಹಟಿ: ದೇಶದ ಮೊದಲ ಪ್ರಧಾನಿ ಸುಭಾಷ್ ಚಂದ್ರ ಬೋಸ್ ಎಂಬ ನಟಿ ಮತ್ತು ರಾಜಕಾರಣಿ ಕಂಗನಾ ರನೌತ್ ಅವರ ಹೇಳಿಕೆಯನ್ನು ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವ ಶರ್ಮಾ ಸಮರ್ಥಿಸಿಕೊಂಡಿದ್ದಾರೆ.

ಪಂಡಿತ್ ಜವಾಹರಲಾಲ್ ನೆಹರೂ ಅವರು ಪ್ರಧಾನ ಮಂತ್ರಿ ಆಗುವುದಕ್ಕೂ 4 ವರ್ಷ ಮುನ್ನವೇ ಸುಭಾಷ್ ಚಂದ್ರ ಬೋಸ್ ಅವರು, ಆಜಾದ್ ಹಿಂದ್ ಸರ್ಕಾರವನ್ನು ಸ್ಥಾಪಿಸಿದ್ದರು. ಅದನ್ನು 9 ದೇಶಗಳು ಗುರುತಿಸಿದ್ದವು ಎಂದು ಅವರು ಹೇಳಿದ್ದಾರೆ.

‘ಕಂಗನಾ ಅವರನ್ನು ಹೀಗಳೆಯುತ್ತಿರುವವರಿಗೆ,‘1943ರ ಅಕ್ಟೋಬರ್ 21ರಂದು ನೇತಾಜಿಯವರು ಆಜಾದ್ ಹಿಂದ್ ಸರ್ಕಾರ ರಚಿಸಿದ್ದರು. ಪ್ರಧಾನ ಮಂತ್ರಿಯಾಗಿ ನೆಹರೂ ಅವರು ಪ್ರಮಾಣವಚನ ಸ್ವೀಕರಿಸುವುದಕ್ಕೂ ಹತ್ತಿರತ್ತಿರ 4 ವರ್ಷ ಮುನ್ನವೇ ರಚನೆಯಾಗಿತ್ತು’ ಎಂದು ಹಿಮಂತ ಎಕ್ಸ್‌ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

‘ಆಜಾದ್ ಸರ್ಕಾರವು ಭಾರತದ ಕಾನೂನುಬದ್ಧ ಸರ್ಕಾರ ಎಂದು 9 ದೇಶಗಳು ಗುರುತಿಸಿದ್ದವು. ವಸಾಹತುಶಾಹಿಗಳ ಮಾದರಿಯಲ್ಲಿ ಇತಿಹಾಸವನ್ನು ಅರ್ಥೈಸುವ ಪ್ರಜ್ಞೆಯ ಪ್ರಚೋದನೆಯನ್ನು 'ಗುಲಾಮಿ ಮಾನಸಿಕತೆ’ ಎಂದು ಕರೆಯಲಾಗುತ್ತದೆ’ಎಂದು ಬರೆದುಕೊಂಡಿದ್ದಾರೆ.

ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಕಂಗನಾ, ಮಾಧ್ಯಮ ಸಂವಾದವೊಂದರಲ್ಲಿ ಭಾರತದ ಮೊದಲ ಪ್ರಧಾನಿ ಸುಭಾಷ್ ಚಂದ್ರ ಬೋಸ್ ಎಂದಿದ್ದರು. ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT