ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಕ್ಕಿಂ ಪ್ರವಾಹ: 2,000 ಜನರನ್ನು ರಕ್ಷಿಸಿದ ಐಎಎಫ್‌

Published 19 ಅಕ್ಟೋಬರ್ 2023, 14:53 IST
Last Updated 19 ಅಕ್ಟೋಬರ್ 2023, 14:53 IST
ಅಕ್ಷರ ಗಾತ್ರ

ಗ್ಯಾಂಗ್ಟಕ್‌: ಪ್ರವಾಹ ಪೀಡಿತ ಸಿಕ್ಕಿಂ ರಾಜ್ಯದ ವಿವಿಧ ಪ್ರದೇಶಗಳಿಂದ ಭಾರತೀಯ ವಾಯು ಪಡೆಯು (ಐಎಎಫ್‌) ಸುಮಾರು 2,000ಕ್ಕೂ ಹೆಚ್ಚು ಜನರನ್ನು ರಕ್ಷಿಸಿದೆ.

ಐಎಎಫ್‌ನ ಚೀತಾ, ಚಿನೋಕ್‌, ಎಂಐ–17 1ವಿ, ಮತ್ತು ಎಂಐ–17 ವಿ5 ಹೆಲಿಕಾಪ್ಟರ್‌ಗಳು ಪ್ರವಾಹ ಪೀಡಿತ ಪ್ರದೇಶಗಳಲ್ಲಿ 262ಕ್ಕೂ ಹೆಚ್ಚು ಬಾರಿ ಸಂಚರಿಸಿ ರಾಜ್ಯ ಸರ್ಕಾರದ ಪರಿಹಾರ ಕಾರ್ಯಕ್ಕೆ ನೆರವಾಗಿವೆ. ಈ ಮೂಲಕ ಮಾನವೀಯ ನೆರವನ್ನು ಐಎಎಫ್‌ ಮುಂದುವರಿಸಿದೆ ಎಂದು ಸರ್ಕಾರದ ಅಧಿಕೃತ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

ಒಟ್ಟಾರೆ 2,002 ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಿರುವ ಐಎಎಫ್‌, ಪ್ರವಾಹ ಪೀಡಿತ ಜನರ ಸ್ಥಳಗಳಿಗೆ 1,32,805 ಕೆ.ಜಿಯಷ್ಟು ಪರಿಹಾರ ಸಾಮಗ್ರಿಗಳನ್ನು ಸಾಗಿಸಿದೆ.

ಸುಮಾರು 259 ಕಾರ್ಯಕರ್ತರು ಮತ್ತು ಭಾರತೀಯ ಸೇನೆಯ 179 ಸಿಬ್ಬಂದಿ ಪರಿಹಾರ ಕಾರ್ಯದಲ್ಲಿ ನಿರತರಾಗಿದ್ದರು. ವಿಪತ್ತಿನ ಸಂದರ್ಭದಲ್ಲಿ ಐಎಎಫ್‌ ರಾಜ್ಯ ಸರ್ಕಾರದ ಜತೆಗೂಡಿ ಸಮನ್ವಯ ಮತ್ತು ಸಂಘಟಿತವಾಗಿ ಕಾರ್ಯ ನಿರ್ವಹಿಸಿವೆ ಎಂದು ತಿಳಿಸಲಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT