ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಸ್ರೇಲ್‌ಗೆ ತೆರಳಿದ ಭಾರತದ ಕಟ್ಟಡ ಕಾರ್ಮಿಕರ ಮೊದಲ ತಂಡ

Published 2 ಏಪ್ರಿಲ್ 2024, 19:11 IST
Last Updated 2 ಏಪ್ರಿಲ್ 2024, 19:11 IST
ಅಕ್ಷರ ಗಾತ್ರ

ನವದೆಹಲಿ: 60 ಜನರಿರುವ ಕಟ್ಟಡ ಕಾರ್ಮಿಕ ಮೊದಲ ತಂಡ ಇಸ್ರೇಲ್‌ಗೆ ಮಂಗಳವಾರ ಪ್ರಯಾಣ ಬೆಳೆಸಿದೆ.

ನೇಮಕಗೊಂಡಿರುವ ಈ 60 ಜನ ಕಟ್ಟಡ ಕಾರ್ಮಿಕರಿಗಾಗಿ ಇಲ್ಲಿನ ಇಸ್ರೇಲ್‌ ರಾಯಭಾರ ಕಚೇರಿ ಬೀಳ್ಕೊಡುವ ಸಮಾರಂಭ ಹಮ್ಮಿಕೊಂಡಿತ್ತು. ರಾಷ್ಟ್ರೀಯ ಕೌಶಲ ಅಭಿವೃದ್ಧಿ ನಿಗಮವು ಈ ಕಾರ್ಮಿಕರಿಗೆ ತರಬೇತಿ ನೀಡಿದೆ.

‘ಉಭಯ ದೇಶಗಳ ಸರ್ಕಾರದ ನಡುವೆ ಆಗಿರುವ ಒಪ್ಪಂದದಂತೆ, ಕಟ್ಟಡ ಕಾರ್ಮಿಕರ ಮೊದಲ ತಂಡವನ್ನು ಬೀಳ್ಕೊಡಲಾಯಿತು. ರಾಷ್ಟ್ರೀಯ ಕೌಶಲ ಅಭಿವೃದ್ಧಿ ನಿಗಮ ಹಾಗೂ ಹಲವು ಸಂ‌ಸ್ಥೆಗಳ ಪರಿಶ್ರಮದ ಫಲವಾಗಿ ಈ ನೇಮಕಾತಿ ನಡೆದಿದೆ’  ಎಂದು ಭಾರತದಲ್ಲಿನ ಇಸ್ರೇಲ್‌ ರಾಯಭಾರಿ ನವೋರ್ ಗಿಲನ್ ಹೇಳಿದ್ದಾರೆ.

ಮುಂದಿನ ಕೆಲವು ವಾರಗಳಲ್ಲಿ 1,500 ಕಾರ್ಮಿಕರು ಇಸ್ರೇಲ್‌ಗೆ ತೆರಳಲಿದ್ದಾರೆ ಎಂದು ಮೂಲಗಳು ಹೇಳಿವೆ.

ಹಮಾಸ್‌ ಬಂಡುಕೋರರ ವಿರುದ್ಧ ಯುದ್ಧ ಮುಂದುವರಿದಿರುವ ನಡುವೆಯೇ, ಭಾರತದಿಂದ ಕಾರ್ಮಿಕರು ಇಸ್ರೇಲ್‌ಗೆ ತೆರಳಿದ್ದು ಗಮನಾರ್ಹ. ಯುದ್ಧ ಆರಂಭಗೊಂಡ ನಂತರ, ಪ್ಯಾಲೆಸ್ಟೀನಿಯನ್ನರಿಗೆ ಇಸ್ರೇಲ್‌ನ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಉದ್ಯೋಗ ನೀಡುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT