ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

940 ಕೆ.ಜಿ ತೂಕದ ಮಾದಕ ವಸ್ತುಗಳನ್ನು ಜಪ್ತಿ ಮಾಡಿದ ನೌಕಾಪಡೆ

Published 16 ಏಪ್ರಿಲ್ 2024, 20:04 IST
Last Updated 16 ಏಪ್ರಿಲ್ 2024, 20:04 IST
ಅಕ್ಷರ ಗಾತ್ರ

ನವದೆಹಲಿ: ಜಂಟಿ ಕಾರ್ಯಪಡೆಯ ಸಹಯೋಗದಲ್ಲಿ ಭಾರತೀಯ ನೌಕಾಪಡೆಯು ಅರಬ್ಬಿ ಸಮುದ್ರದಲ್ಲಿ 940 ಕಿಲೋ ಗ್ರಾಂ ತೂಕದ ಮಾದಕ ವಸ್ತುಗಳನ್ನು ಜಪ್ತಿ ಮಾಡಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

‘ಕ್ರಿಮ್ಸನ್‌ ಬರ್ರಕುಡಾ’ ಹೆಸರಿನ ಕಾರ್ಯಾಚರಣೆಯ ಭಾಗವಾಗಿ ಐಎನ್‌ಎಸ್‌ ತಲ್ವಾರ್‌ ಹಡಗಿನೊಂದಿಗೆ ಸಮುದ್ರಕ್ಕಿಳಿದಿದ್ದ ಭಾರತೀಯ ನೌಕಾಪಡೆಯ ಕಮಾಂಡೊಗಳು ಸಣ್ಣ ಹಡಗೊಂದರಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಮಾದಕವಸ್ತುಗಳನ್ನು ಜಪ್ತಿ ಮಾಡಿದ್ದಾರೆ’ ಎಂದು ನೌಕಾಪಡೆಯ ವಕ್ತಾರರು ತಿಳಿಸಿದ್ದಾರೆ.

ಸಾಗರ ರಕ್ಷಣೆಯ ಜಂಟಿಪಡೆಯೊಂದಿಗೆ ಭಾರತೀಯ ನೌಕಾಪಡೆಯು ಇದೇ ಮೊದಲ ಬಾರಿಗೆ ಮಾದಕವಸ್ತುಗಳ ಸಾಗಾಣಿಕೆ ವಿರುದ್ಧ ಕಾರ್ಯಾಚರಣೆ ನಡೆಸಿತು. ಸಾಗರ ರಕ್ಷಣೆಗಾಗಿ ಹಲವು ದೇಶಗಳು ಒಟ್ಟು ಸೇರಿ ಮಾಡಿರುವ ರಕ್ಷಣಾ ಒಕ್ಕೂಟಕ್ಕೆ ಭಾರತವು ಕಳೆದ ವರ್ಷ ನವೆಂಬರ್‌ನಲ್ಲಿ ಸೇರಿಕೊಂಡಿತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT