ನವದೆಹಲಿ: ‘2025-26ನೇ ಸಾಲಿನಲ್ಲಿ ಎರಡನೇ ಆವೃತ್ತಿಯ ಪಿಎಚ್.ಡಿ ಪ್ರವೇಶಾತಿ ಪ್ರಕ್ರಿಯೆಯನ್ನು ಡಿಸೆಂಬರ್ನಲ್ಲಿ ನಡೆಸಲು ತಾತ್ಕಾಲಿಕ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಜವಾಹರ್ಲಾಲ್ ನೆಹರೂ ವಿಶ್ವವಿದ್ಯಾಲಯವು ಪ್ರಕಟಿಸಿದೆ.

‘ಈ ಪ್ರಕ್ರಿಯೆಯನ್ನು ಯುಜಿಸಿ, ಸಿಎಸ್ಐಆರ್, ಜೆಆರ್ಎಫ್, ಎನ್ಇಟಿ, ಡಿಬಿಟಿ–ಜೆಆರ್ಎಫ್, ಐಸಿಎಂಎರ್–ಜೆಆರ್ಎಫ್ ಮೂಲಕ ನಡೆಸಲಾಗುವುದು’ ಎಂದು ವಿಶ್ವವಿದ್ಯಾಲಯವು ಪ್ರಕಟಿಸಿದ ಸುತ್ತೋಲೆಯಲ್ಲಿ ತಿಳಿಸಿದೆ.

ಪ್ರಬಂಧ ಸಲ್ಲಿಕೆ ಬಾಕಿ ಉಳಿದ ಪಿಎಚ್.ಡಿ ಅಭ್ಯರ್ಥಿಗಳ ಹಾಸ್ಟೆಲ್ ಸೌಕರ್ಯವನ್ನು ವಿಸ್ತರಿಸಿ, ಪ್ರತ್ಯೇಕ ಸುತ್ತೋಲೆಯೊಂದನ್ನು ಹೊರಡಿಸಲಾಗಿದೆ. ಇದಕ್ಕಾಗಿ ಸಂಬಂಧಪಟ್ಟ ಸೂಪರ್ವೈಸರ್, ಮುಖ್ಯಸ್ಥರು ಅಥವಾ ಡೀನ್ಗಳ ಸಹಿ ಮಾಡಿದ ಅರ್ಜಿಯನ್ನು ಸಲ್ಲಿಸಬೇಕು ಎಂದು ತಿಳಿಸಿದೆ.

ಮಾನವೀಯತೆ ಆಧಾರದಲ್ಲಿ ಪ್ರತಿ ಪ್ರಕರಣವನ್ನು ಆಧರಿಸಿ ಈ ಮನವಿಯನ್ನು ಪರಿಗಣಿಸಲಾಗುವುದು ಎಂದು ಜೆಎನ್ಯು ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.

ಎಲ್ಲ ಪಿಎಚ್.ಡಿ ಕಾರ್ಯಕ್ರಮಗಳಿಗೆ ಜೆಎನ್ಯು ಪ್ರವೇಶಾತಿ ಪರೀಕ್ಷೆಯನ್ನು ಬದಲಾವಣೆಯೊಂದಿಗೆ ಮತ್ತೆ ನಡೆಸಬೇಕು ಎಂದು ಒತ್ತಾಯಿಸಿ, ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಒಕ್ಕೂಟದ ಅಧ್ಯಕ್ಷ ನಿತೀಶ್ ಕುಮಾರ್ ನೇತೃತ್ವದಲ್ಲಿ ವಿದ್ಯಾರ್ಥಿಗಳು ಕಳೆದ 10 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು. ಹೋರಾಟಕ್ಕೆ ವಿ.ವಿ ಮಣಿದಿದ್ದು, ಬೇಡಿಕೆ ಈಡೇರಿಸಲು ಒಪ್ಪಿಗೆ ಸೂಚಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.