ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಚ್ಚಿ: ಪಿ.ಎಂ–2 ಆನೆಯನ್ನು ಮರಳಿ ಕಾಡಿಗೆ ಬಿಡಲು ತಜ್ಞರ ಸಲಹೆ

Published 11 ಜನವರಿ 2024, 14:41 IST
Last Updated 11 ಜನವರಿ 2024, 14:41 IST
ಅಕ್ಷರ ಗಾತ್ರ

ಪಿಟಿಐ

ಕೊಚ್ಚಿ: ವಯನಾಡಿನ ಅರಣ್ಯದಿಂದ ಸೆರೆಹಿಡಿದಿರುವ ‘ಪಂದಲ್ಲೂರು ಮಾಖ್ನಾ’ (ಪಿ.ಎಂ–2) ಹೆಸರಿನ ಆನೆಯನ್ನು ಮರಳಿ ಕಾಡಿಗೆ ಬಿಡಬೇಕೆಂದು ಕೇರಳ ಹೈಕೋರ್ಟ್ ರಚಿಸಿರುವ ತಜ್ಞರ ಸಮಿತಿ ಸಲಹೆ ನೀಡಿದೆ.

ಆನೆ ತಜ್ಞರಾದ ಡಾ. ಪಿ.ಎಸ್‌. ಈಸಾ, ಡಾ. ಎಂ. ಆನಂದ ಕುಮಾರ್‌ ಮತ್ತಿತರರನ್ನೊಳಗೊಂಡ ಸಮಿತಿಯು ಈ ಶಿಫಾರಸು ಮಾಡಿದೆ. ಅರಣ್ಯ ಇಲಾಖೆಯು ಕಳೆದ ವರ್ಷ ಸೆರೆ ಹಿಡಿದಿದ್ದ ಅಂದಾಜು 13 ವರ್ಷ ಪ್ರಾಯದ ಈ ಕಾಡಾನೆ ಸದ್ಯ ಮುತ್ತುಂಗಾ ಆನೆ ಶಿಬಿರದಲ್ಲಿದೆ. 

ಆನೆಯ ಚಲನವಲನಗಳ ಮೇಲೆ ನಿಗಾ ವಹಿಸುವ ಸಲುವಾಗಿ ಅದಕ್ಕೆ ರೇಡಿಯೊ ಕಾಲರ್‌ ಅಳವಡಿಸಬೇಕು ಎಂದೂ ಸಮಿತಿ ಹೇಳಿದೆ.

ಕೇರಳ ಹೈಕೋರ್ಟ್‌ಗೆ ಈಚೆಗೆ ವರದಿ ಸಲ್ಲಿಸಿರುವ ಸಮಿತಿಯು ಅರಣ್ಯ ಇಲಾಖೆಯ ಕಾರ್ಯವೈಖರಿಯನ್ನು ಟೀಕಿಸಿದೆ. ವಯನಾಡಿನ ಸುಲ್ತಾನ್‌ ಬತ್ತೇರಿ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದ ಈ ಆನೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆಯು ಅನಗತ್ಯ ಆತುರ ತೋರಿದೆ ಎಂದೂ ಹೇಳಿದೆ.

ಪಂದಲ್ಲೂರು ಪ್ರದೇಶದಲ್ಲಿ ಪಿ.ಎಂ–2 ಆನೆಯು ವ್ಯಕ್ತಿಯೊಬ್ಬರನ್ನು ಕೊಂದಿದೆ ಎಂದು ತಮಿಳುನಾಡಿನ ಅರಣ್ಯ ಇಲಾಖೆಯು ಹೇಳಿತ್ತು.

ಈ ಆನೆಯನ್ನು ಸೆರೆ ಹಿಡಿದಿದ್ದ  ತಮಿಳುನಾಡಿನ ಅರಣ್ಯ ಇಲಾಖೆಯು ಬಳಿಕ ಮುದುಮಲೈ ಹುಲಿ ಸಂರಕ್ಷಿತಾರಣ್ಯದ ವ್ಯಾಪ್ತಿಯಲ್ಲಿ ಬಿಟ್ಟಿತ್ತು. ಬಳಿಕ ಇದು ವಯನಾಡಿಗೆ ಬಂದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT