ಪಾಲಿಕೆ ಸದಸ್ಯರಲ್ಲದವರನ್ನು ಕೂಡ ಮೇಯರ್ ಸ್ಥಾನಕ್ಕೆ ನೇಮಕ ಮಾಡಲು ಅವಕಾಶ ಕಲ್ಪಿಸುವ ಕೋಲ್ಕತ್ತ ಮಹಾನಗರ ಪಾಲಿಕೆ (2ನೇ ತಿದ್ದುಪಡಿ) ಮಸೂದೆಗೆ ಪಶ್ಚಿಮ ಬಂಗಾಳ ವಿಧಾನಸಭೆ ಗುರುವಾರ ಮಧ್ಯಾಹ್ನ ಅನುಮೋದನೆ ನೀಡಿದ ಬೆನ್ನಲ್ಲೇ ಹಕೀಮ್ ಅವರನ್ನು ನೇಮಿಸಲಾಗಿದೆ. ಸ್ವತಃ ಹಕೀಮ್ ಅವರೇ ಈ ತಿದ್ದುಪಡಿ ಮಸೂದೆಯನ್ನು ಮಂಡಿಸಿದ್ದು ವಿಶೇಷ.