ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವಸ್ಥಾನದ ಒಂದು ನಿಂಬೆಹಣ್ಣು ₹35 ಸಾವಿರಕ್ಕೆ ಹರಾಜು!

ಈರೋಡ್‌ ಬಳಿಯ ಗ್ರಾಮವೊಂದರ ದೇವಸ್ಥಾನದಲ್ಲಿ ಶಿವರಾತ್ರಿ ಆಚರಣೆ ವೇಳೆ ನಡೆದ ಹರಾಜಿನಲ್ಲಿ ಒಂದು ನಿಂಬೆಹಣ್ಣು ₹35 ಸಾವಿರಕ್ಕೆ ಹರಾಜಾಗಿದೆ.
Published 10 ಮಾರ್ಚ್ 2024, 14:31 IST
Last Updated 10 ಮಾರ್ಚ್ 2024, 14:31 IST
ಅಕ್ಷರ ಗಾತ್ರ

ಈರೋಡ್‌, ತಮಿಳುನಾಡು: ಈರೋಡ್‌ ಬಳಿಯ ಗ್ರಾಮವೊಂದರ ದೇವಸ್ಥಾನದಲ್ಲಿ ಶಿವರಾತ್ರಿ ಆಚರಣೆ ವೇಳೆ ನಡೆದ ಹರಾಜಿನಲ್ಲಿ ಒಂದು ನಿಂಬೆಹಣ್ಣು ₹35 ಸಾವಿರಕ್ಕೆ ಹರಾಜಾಗಿದೆ. 

ಶಿವಗಿರಿ ಗ್ರಾಮದ ಪಾಯಪೂಸಿಯನ್‌ ದೇವಸ್ಥಾನದಲ್ಲಿ ಎಂದಿನ ಪದ್ಧತಿಯಂತೆ ಶಿವನಿಗೆ ಅರ್ಪಿಸಿದ್ದ ನಿಂಬೆ ಹಣ್ಣು ಮತ್ತಿತರ ಹಣ್ಣುಗಳನ್ನು ಹರಾಜಿಗಿಡಲಾಗಿತ್ತು. ಸುಮಾರು 15 ಮಂದಿ ಭಕ್ತರು ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಈರೋಡ್‌ನ ಭಕ್ತರೊಬ್ಬರು ₹35 ಸಾವಿರಕ್ಕೆ ಒಂದು ನಿಂಬೆಹಣ್ಣನ್ನು ಕೊಂಡರು ಎಂದು ದೇವಸ್ಥಾನದ ಅಧಿಕಾರಿಗಳು ತಿಳಿಸಿದ್ದಾರೆ. 

ದೇವರಿಗೆ ಅರ್ಪಿಸಿರುವ ನಿಂಬೆಹಣ್ಣನ್ನು ಅತಿಹೆಚ್ಚು ಮೊತ್ತ ನೀಡಿ ಪಡೆದವರಿಗೆ ಐಶ್ವರ್ಯ ಮತ್ತು ಉತ್ತಮ ಆರೋಗ್ಯ ಪ್ರಾಪ್ತಿಯಾಗುತ್ತದೆ ಎಂಬ ಪ್ರತೀತಿ ಇಲ್ಲಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT