ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಧ್ಯಪ್ರದೇಶ: ಅಫ್ಗಾನ್‌ ಮೂಲದ ನೂರ್‌ ಜಹಾನ್ ತಳಿಯ ಮಾವಿನ ಬೆಳೆ ಕುಸಿತ

Published 17 ಮೇ 2024, 6:51 IST
Last Updated 17 ಮೇ 2024, 6:51 IST
ಅಕ್ಷರ ಗಾತ್ರ

ಇಂದೋರ್‌: ಮಧ್ಯಪ್ರದೇಶದ ಅಲಿರಾಜಪುರ ಜಿಲ್ಲೆಯ ಕತಿವಾಡ ಪ್ರದೇಶದಲ್ಲಿ ಬೆಳೆಯುವ ಅಪರೂಪದ ನೂರ್‌ ಜಹಾನ್ ತಳಿಯ ಮಾವಿನ ಮರಗಳ ಸಂಖ್ಯೆ 10ಕ್ಕೆ ಕುಸಿದಿದ್ದು, ಮಾವಿನ ತಳಿಯ ಸಂರಕ್ಷಣೆಗೆ ಅಧಿಕಾರಿಗಳು ಮುಂದಡಿಯಿಟ್ಟಿದ್ದಾರೆ.

ಅಲಿರಾಜಪುರ ಜಿಲ್ಲೆಯಲ್ಲಿ ಮಾತ್ರ ಬೆಳೆಯುವ ನೂರ್‌ ಜಹಾನ್ ಮಾವಿನ ತಳಿಯ ಮರಗಳನ್ನು ಹೆಚ್ಚಿಸಲು ಹೊಸ ಸಸಿಗಳನ್ನು ಅಂಗಾಂಶ ಕೃಷಿಯ ಸಹಾಯದಿಂದ ಸಿದ್ಧಪಡಿಸುವಂತೆ ಅರಣ್ಯ ಇಲಾಖೆಗೆ ವಿಭಾಗೀಯ ಆಯುಕ್ತರು ಸೂಚನೆ ನೀಡಿದ್ದಾರೆ.

ಅಫ್ಗಾನಿಸ್ತಾನ ಮೂಲದ ಈ ನೂರ್‌ ಜಹಾನ್ ಮಾವಿನ ತಳಿ ಅದರ ಗಾತ್ರದಿಂದಲೇ ಹೆಸರುವಾಸಿಯಾಗಿದೆ. ಅಲ್ಲದೆ ಒಂದು ಹಣ್ಣಿನ ತೂಕ 3.5 ರಿಂದ 4.5 ಕೆ.ಜಿವರೆಗೆ ಇರುತ್ತದೆ. 

'ನನ್ನ ಬಳಿ ಮೂರು ನೂರ್‌ ಜಹಾನ್ ತಳಿಯ ಮಾವಿನ ಮರಗಳಿವೆ. ಈ ಬಾರಿ ಎಲ್ಲಾ ಮರಗಳಿಂದ ಸೇರಿ ಕೇವಲ 20 ಕಾಯಿಗಳು ಮಾತ್ರ ದೊರೆತಿವೆ. ಅಕಾಲಿಕ ಮಳೆಯಿಂದಾಗಿ ಬೆಳೆ ನಾಶವಾಗಿದೆ. ಕಳೆದ ವರ್ಷ 3.8ಕೆ.ಜಿಯ ಒಂದು ಹಣ್ಣು ₹2 ಸಾವಿರಕ್ಕೆ ಮಾರಾಟವಾಗಿತ್ತು’ ಎಂದು ನೂರ್‌ ಜಹಾನ್ ಮಾವಿನ ಮರಗಳನ್ನು ಬೆಳೆಸುತ್ತಿರುವ ರೈತ ಶಿವರಾಜ್‌ ಸಿಂಗ್‌ ಜಾಧವ್‌ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT