ದಟ್ಟ ಮಂಜು; ಇಳಿಯದ ಹೆಲಿಕಾಪ್ಟರ್
ನಾಡಿಯಾ ಜಿಲ್ಲೆಯ ತಾಹೆರ್‌ಪುರದಲ್ಲಿ ದಟ್ಟವಾದ ಮಂಜು ಕವಿದ ವಾತಾವರಣ ಇದ್ದ ಕಾರಣ ಪ್ರಧಾನಿ ನರೇಂದ್ರ ಮೋದಿ ಅವರಿದ್ದ ಹೆಲಿಕಾಪ್ಟರ್ ಕೆಳಗಿಳಿಯಲು ಸಾಧ್ಯವಾಗಲಿಲ್ಲ. ಗೋಚರತೆ ಪ್ರಮಾಣ ಕಡಿಮೆ ಇದ್ದಿದ್ದರಿಂದ ಹೆಲಿಕಾಪ್ಟರ್ ಕೆಲ ಸಮಯದವರೆಗೆ ತಾತ್ಕಾಲಿಕ ಹೆಲಿಪ್ಯಾಡ್ ಮೈದಾನದ ಮೇಲೆ ತಿರುಗಾಡಿತು. ಕೊನೆಗೆ ‘ಯು– ಟರ್ನ್’ ಮಾಡಿ ಕೋಲ್ಕತ್ತ ವಿಮಾನ ನಿಲ್ದಾಣಕ್ಕೆ ತೆರಳಿತು. ಅಲ್ಲಿಂದ ರಸ್ತೆ ಮಾರ್ಗವಾಗಿ ಹೋದರೆ ವಿಳಂಬವಾಗುತ್ತಿತ್ತು ಮತ್ತು ಪ್ರಧಾನಿ ಅವರ ದೈನಿಕ ವೇಳಾಪಟ್ಟಿಯಲ್ಲಿ ವ್ಯತ್ಯಾಸಗಳು ಉಂಟಾಗುತ್ತಿದ್ದವು. ಹೀಗಾಗಿ ವಿಮಾನ ನಿಲ್ದಾಣದ ವಿಐಪಿ ಮೊಗಸಾಲೆಯಿಂದಲೇ ವರ್ಚುವಲ್ ಆಗಿ ಪ್ರಧಾನಿ ಅವರು ಜನಸಮೂಹವನ್ನು ಉದ್ದೇಶಿಸಿ ಮಾತನಾಡಿದರು ಎಂದು ಮೂಲಗಳು ತಿಳಿಸಿವೆ.