ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ಯಾಮ ಪ್ರಸಾದ್‌ ಮುಖರ್ಜಿ ಸಿದ್ಧಾಂತದ ಹಾದಿಯಲ್ಲಿ ಮೋದಿ: ಯೋಗಿ ಆದಿತ್ಯನಾಥ್‌

Published 6 ಜುಲೈ 2023, 10:47 IST
Last Updated 6 ಜುಲೈ 2023, 10:47 IST
ಅಕ್ಷರ ಗಾತ್ರ

ಲಖನೌ: ಭಾರತೀಯ ಜನಸಂಘದ ಸ್ಥಾಪಕ, ಶ್ಯಾಮ ಪ್ರಸಾದ್‌ ಮುಖರ್ಜಿ ಅವರ ಪರಂಪರೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮುಂದುವರಿಸಿಕೊಂಡು ಬರುತ್ತಿದ್ದಾರೆಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಹೇಳಿದ್ದಾರೆ.

ಶ್ಯಾಮ ಪ್ರಸಾದ್‌ ಅವರ 123ನೇ ಜನ್ಮದಿನದ ಅಂಗವಾಗಿ ಇಲ್ಲಿನ ಸಿವಿಲ್‌ ಆಸ್ಪತ್ರೆಯ ಆವರಣದಲ್ಲಿ ಅವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ದೇಶದ ಏಕತೆ ಮತ್ತು ಸಮಗ್ರತೆಗಾಗಿ ಮುಖರ್ಜಿ ಅವರ ತ್ಯಾಗವನ್ನು ಭಾರತೀಯರು ಸದಾ ನೆನಪಿಸಿಕೊಳ್ಳುಬೇಕು. ಭಾರತದ ಕೈಗಾರಿಕಾ ಮತ್ತು ಆಹಾರ ನೀತಿ ನಿರೂಪಣೆಯಲ್ಲಿ ಅವರು ಮಾರ್ಗದರ್ಶಕರಾಗಿದ್ದರು ಎಂದು ಬಣ್ಣಿಸಿದ್ದಾರೆ.

ಜವಾಹರಲಾಲ್‌ ನೆಹರು ಸರ್ಕಾರದಲ್ಲಿ ಸಚಿವರಾಗಿದ್ದ ಶ್ಯಾಮ ಪ್ರಸಾದ್‌ ಮುಖರ್ಜಿ, ಸರ್ಕಾರದ ‘ತುಷ್ಟೀಕರಣ‘ ನೀತಿ ಅಳವಡಿಸಿಕೊಂಡಾಗ, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಜನಸಂಘ ಎಂಬ ರಾಜಕೀಯ ಪಕ್ಷವನ್ನು ಸ್ಥಾಪಿಸಿದರು.

ನೆಹರು ಸರ್ಕಾರದಲ್ಲಿ, ಭಾರತದ ಸಂವಿಧಾನಕ್ಕೆ 370ನೇ ವಿಧಿಯನ್ನು ಸೇರಿಸುವುದರ ವಿಚಾರದಲ್ಲಿ ನೆಹರು ಹಾಗೂ ಮುಖರ್ಜಿ ಅವರ ಮಧ್ಯೆ ಭಿನ್ನಾಭಿಪ್ರಾಯಗಳು ಸೃಷ್ಟಿಯಾದವು. ಒಂದು ದೇಶವು ಎರಡು ಸಂವಿಧಾನ, ಇಬ್ಬರು ಪ್ರಧಾನಿ ಮಂತ್ರಿಗಳು, ಎರಡು ಲಾಂಛನ ಹೊಂದಿರಲು ಸಾಧ್ಯವಿಲ್ಲ ಎಂದು ಮುಖರ್ಜಿ ಅವರು ವಿರೋಧಿಸಿದ್ದರು ಎಂದು ಯೋಗಿ ಆದಿತ್ಯನಾಥ್‌ ತಿಳಿಸಿದ್ದಾರೆ.

ಕೋಲ್ಕತ್ತ ವಿಶ್ವವಿದ್ಯಾಲಯದಲ್ಲಿ ಉಪಕುಪತಿಯಾಗಿ ಸೇವೆ ಸಲ್ಲಿಸಿದ ಮುಖರ್ಜಿ, ಬಂಗಾಳದಲ್ಲಿ ಉಂಟಾಗಿದ್ದ ಕ್ಷಾಮದ ಸಮಯದಲ್ಲಿ ಮಾದರಿ ಮಾನವತಾವಾದವನ್ನು ಪ್ರತಿಪಾದಿಸಿದರು ಎಂದು ಯೋಗಿ ಹೇಳಿದ್ದಾರೆ

ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ ಪ್ರಧಾನಿ ಮೋದಿ ಸರ್ಕಾರವು ಮುಖರ್ಜಿ ಅವರ ಸಿದ್ಧಾಂತವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದೆ. ಇಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಅಭಿವೃದ್ದಿ ಕಾರ್ಯಗಳು ನಡೆಯುತ್ತಿವೆ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT