ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ ಮೋದಿ ಅಫೀಮಿನ ನಶೆಯಲ್ಲಿ ಮಲಗಿದ್ದರು: ಮಲ್ಲಿಕಾರ್ಜುನ ಖರ್ಗೆ

ಚುನಾವಣಾ ರ‍್ಯಾಲಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ
Published 4 ಏಪ್ರಿಲ್ 2024, 15:47 IST
Last Updated 4 ಏಪ್ರಿಲ್ 2024, 15:47 IST
ಅಕ್ಷರ ಗಾತ್ರ

ಜೈಪುರ: ಪ್ರಧಾನಿ ನರೇಂದ್ರ ಮೋದಿ ಅವರು ಸುಳ್ಳುಗಳ ಸರದಾರ. ಚೀನಾವು ಭಾರತದ ಗಡಿಯೊಳಗೆ ಬರುವ ವೇಳೆ ಮೋದಿ ಅವರು ಅಫೀಮಿನ ನಶೆಯಲ್ಲಿದ್ದಂತೆ ಮಲಗಿದ್ದರು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದರು.

ರಾಜಸ್ತಾನದ ಛಿತ್ತೋರ್‌ಗಢದಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಖರ್ಗೆ ಅವರು, ‘ಮೋದಿ ಅವರು ದೇಶದ ಬಗ್ಗೆ ಯೋಚನೆ ಮಾಡುವ ಬದಲು ದೇಶಕ್ಕಾಗಿ ತಮ್ಮ ಜೀವನವನ್ನು ತ್ಯಾಗ ಮಾಡಿದ ಗಾಂಧಿ ಪರಿವಾರವನ್ನು ಟೀಕಿಸುವುದರಲ್ಲೇ ನಿರತರಾಗಿದ್ದಾರೆ’ ಎಂದರು.

‘ನನಗೆ 56 ಇಂಚಿನ ಎದೆ ಇದೆ. ನಾನು ಯಾರಿಗೂ ಹೆದರುವುದಿಲ್ಲ ಎಂದು ಹೇಳುವ ಮೋದಿಯವರು, ಯಾಕೆ ಭಾರತದ ದೊಡ್ಡ ಭಾಗವನ್ನು ಚೀನಾಕ್ಕೆ ಬಿಟ್ಟುಕೊಟ್ಟರು. ಚೀನಿಯರು ಭಾರತದೊಳಗೆ ಬರುವಾಗ ನೀವು ಯಾಕೆ ಮಲಗಿದ್ದಿರಿ; ನಿದ್ದೆ ಗುಳಿಗೆ ತೆಗೆದುಕೊಂಡಿದ್ದಿರಾ. ಅವರು ರಾಜಸ್ದಾನದ ಹೊಲಗಳಿಂದ ಅಫೀಮು ತೆಗೆದುಕೊಂಡು ಹೋಗಿ ನಿಮಗೆ ತಿನ್ನಿಸಿದ್ದಾರಾ’ ಎಂದು ಪ್ರಶ್ನಿಸಿದ್ದಾರೆ.

‘ಮೋದಿಯವರು ಜನರಿಗೆ ಹಿಂಸೆ ನೀಡಿ ತಮ್ಮೊಂದಿಗೆ ಕರೆದೊಯ್ಯುತ್ತಿದ್ದಾರೆ. 1989ರ ಬಳಿಕ ಗಾಂಧಿ ಪರಿವಾರದಿಂದ ಯಾರೊಬ್ಬರೂ ಪ್ರಧಾನಿ ಅಥವಾ ಸಚಿವರಾಗಿಲ್ಲ. ಆದರೂ ಮೋದಿ ಕುಟುಂಬ ರಾಜಕಾರಣದ ಆರೋಪ ಮಾಡುತ್ತಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT