ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪಂಜಾಬ್‌ನಲ್ಲಿ ಅಕಾಲಿಕ ಮಳೆ: ಗೋಧಿ ಬೆಳೆ ನಷ್ಟ

Published 30 ಮಾರ್ಚ್ 2024, 16:08 IST
Last Updated 30 ಮಾರ್ಚ್ 2024, 16:08 IST
ಅಕ್ಷರ ಗಾತ್ರ

ಚಂಡೀಗಢ: ಪಂಜಾಬ್‌ನ ವಿವಿಧೆಡೆ ಶನಿವಾರ ಅಕಾಲಿಕವಾಗಿ ಮಳೆ ಸುರಿದಿದ್ದು, ಗೋಧಿ ಬೆಳೆಗಾರರು ಆತಂಕಗೊಂಡಿದ್ದಾರೆ.

ಕಳೆದ ವರ್ಷದ ಅಕ್ಟೋಬರ್‌ ಮತ್ತು ಡಿಸೆಂಬರ್‌ನಲ್ಲಿ ಬಿತ್ತನೆ ಮಾಡಿರುವ ಗೋಧಿ ಫಸಲು ಕೊಯ್ಲಿಗೆ ಬಂದಿದೆ. ಏಪ್ರಿಲ್‌ 1ರಿಂದ ಪಂಜಾಬ್‌ ಹಾಗೂ ಹರಿಯಾಣದಲ್ಲಿ ಗೋಧಿ ಸಂಗ್ರಹಣೆ ಆರಂಭವಾಗಲಿದೆ. ಈ ವೇಳೆಯೇ ಮಳೆ ಹಾಗೂ ಗಾಳಿಯ ವೇಗವು ಹೆಚ್ಚಿದ್ದು, ಫಸಲು ನೆಲಕಚ್ಚಿದೆ. 

ಬಟಿಂಡಾ, ಫಾಜಿಲ್ಕಾ, ಲೂಧಿಯಾನ, ಪಾಟಿಯಾಲ, ಅಮೃತಸರ ಹಾಗೂ ಪಠಾಣ್‌ಕೋಟ್‌ನಲ್ಲಿ ಮಳೆ ಸುರಿದಿದೆ. ಕೆಲವೆಡೆ ಆಲಿಕಲ್ಲು ಸಹಿತ ಮಳೆಯಾಗಿದೆ.

‌ಮಾಲ್ವಾ ಭಾಗದಲ್ಲಿ ಅತಿಹೆಚ್ಚು ಫಸಲು ಹಾನಿಗೀಡಾಗಿದೆ. ಈ ಬಗ್ಗೆ ಸಮೀಕ್ಷೆ ನಡೆಸಿ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಶಿರೋಮಣಿ ಅಕಾಲಿ ದಳವು, ಸರ್ಕಾರಕ್ಕೆ ಒತ್ತಾಯಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT