ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಸಭೆ: ಏಪ್ರಿಲ್‌ನಲ್ಲಿ ಎನ್‌ಡಿಎಗೆ ಬಹುಮತ?

Published 28 ಫೆಬ್ರುವರಿ 2024, 15:47 IST
Last Updated 28 ಫೆಬ್ರುವರಿ 2024, 15:47 IST
ಅಕ್ಷರ ಗಾತ್ರ

ನವದೆಹಲಿ: ನೂತನವಾಗಿ ಚುನಾಯಿತರಾದವರು ಪ್ರತಿಜ್ಞಾವಿಧಿ ಸ್ವೀಕರಿಸಿದ ಮೇಲೆ ಹಾಗೂ ಖಾಲಿ ಇರುವ 6 ಸ್ಥಾನಗಳಿಗೆ ನಾಮನಿರ್ದೇಶನ ಪ್ರಕ್ರಿಯೆ ಪೂರ್ಣಗೊಂಡ ನಂತರ, ಬಿಜೆಪಿ ನೇತೃತ್ವದ ಎನ್‌ಡಿಎಗೆ ರಾಜ್ಯಸಭೆಯಲ್ಲಿ ಏಪ್ರಿಲ್‌ನಲ್ಲಿ ಬಹುಮತ ಸಿಗಲಿದೆ.

245 ಸದಸ್ಯ ಬಲದ ರಾಜ್ಯಸಭೆಯಲ್ಲಿ ಸದ್ಯ, ಎನ್‌ಡಿಎ ಸದಸ್ಯ ಬಲ 113 ಇದೆ. ಸರಳ ಬಹುಮತಕ್ಕೆ 123ರ ಗಡಿ ತಲುಪಬೇಕು. ಹೀಗಾಗಿ, ನೂತನ ಸದಸ್ಯರ ಪ್ರಮಾಣವಚನ ಸ್ವೀಕಾರ ಹಾಗೂ ಖಾಲಿ ಸ್ಥಾನಗಳಿಗೆ ನಾಮನಿರ್ದೇಶನ ಪ್ರಕ್ರಿಯೆಯಿಂದ ಎನ್‌ಡಿಎ ಈ ಬಹುಮತಕ್ಕೆ ಅಗತ್ಯವಿರುವಷ್ಟು ಸಂಖ್ಯಾಬಲ ಹೊಂದಲಿದೆ.

ರಾಜ್ಯಸಭೆ ಸಚಿವಾಲಯದ ಅಂಕಿ–ಅಂಶಗಳ ಪ್ರಕಾರ' ಬಿಜೆಪಿ ಸದಸ್ಯರ ಸಂಖ್ಯೆ 94. ವಿಧಾನಸಭೆಗಳಿಂದ ರಾಜ್ಯಸಭೆಗೆ ಮಂಗಳವಾರ ನಡೆದ ಚುನಾವಣೆಯಲ್ಲಿ ಇಬ್ಬರು ಗೆದ್ದಿರುವ ಕಾರಣ, ಬಿಜೆಪಿ ಸದಸ್ಯ ಬಲ 96ಕ್ಕೆ ಏರಿದೆ.

ರಾಷ್ಟ್ರಪತಿಗಳು 12 ಸ್ಥಾನಗಳಿಗೆ ನಾಮನಿರ್ದೇಶನ ಮಾಡುತ್ತಾರೆ. ಈ ಪೈಕಿ, ಈಗಾಗಲೇ ಕೆಲ ನಾಮನಿರ್ದೇಶಿತ ಸದಸ್ಯರು ಬಿಜೆಪಿಗೆ ಸೇರ್ಪಡೆಯಾಗಿರುವುದರಿಂದ, ತೆರವಾಗಿರುವ 6 ಸ್ಥಾನಗಳಿಗೆ  ನಾಮನಿರ್ದೇಶನ ಮಾಡಲಾಗುತ್ತದೆ.

ಈ ಸಂಖ್ಯಾಬಲದ ಗಡಿ ತಲುಪಿದ ಮೇಲೆ, ಪ್ರಮುಖ ಮಸೂದೆಗಳಿಗೆ ಅಂಗೀಕಾರ ಪಡೆಯಲು ಎನ್‌ಡಿಎಗೆ ಸಾಧ್ಯವಾಗಲಿದೆ. ಈ ವರೆಗೆ, ಕೆಲ ಪಕ್ಷೇತರರು ಹಾಗೂ ನಾಮನಿರ್ದೇಶಿತ ಸದಸ್ಯರ ನೆರವು ಪಡೆದು, ಮಸೂದೆಗಳಿಗೆ ಅಂಗೀಕಾರ ಪಡೆಯುತ್ತಿತ್ತು.

ರಾಜ್ಯಸಭೆಯಲ್ಲಿ ಕಾಂಗ್ರೆಸ್‌ನ ಸಂಖ್ಯಾಬಲ 30ಕ್ಕೆ ಇಳಿದಿದೆ. ಹೀಗಾಗಿ, ಕಾಂಗ್ರೆಸ್‌ ಒಳಗೊಂಡಂತೆ  ಮೇಲ್ಮನೆಯಲ್ಲಿ ವಿರೋಧ ಪಕ್ಷಗಳ ಪಾಳಯದ ಸದಸ್ಯರ ಸಂಖ್ಯೆ 100ಕ್ಕಿಂತ ಕಡಿಮೆಯಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT