ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Telangana Election 2023: ತೆಲಂಗಾಣದಲ್ಲಿ ಈ ಸಾರಿ ಮತದಾನದ ಪ್ರಮಾಣ ಎಷ್ಟು?

2018ರ ಚುನಾವಣೆಯಲ್ಲಿ ಶೇ 73.7 ಮತದಾನ ನಡೆದಿತ್ತು
Published 1 ಡಿಸೆಂಬರ್ 2023, 2:48 IST
Last Updated 1 ಡಿಸೆಂಬರ್ 2023, 2:48 IST
ಅಕ್ಷರ ಗಾತ್ರ

ಹೈದರಾಬಾದ್: ತೆಲಂಗಾಣ ವಿಧಾನಸಭೆಯ 119 ಸ್ಥಾನಗಳಿಗೆ ನಿನ್ನೆ ನಡೆದ ಮತದಾನ ಬಹುತೇಕ ಶಾಂತಿಯುತವಾಗಿತ್ತು. ಒಟ್ಟು ಶೇ 70.60 ರಷ್ಟು ಮತದಾನ ದಾಖಲಿಸಲಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ.

2018ರ ಚುನಾವಣೆಯಲ್ಲಿ ಶೇ 73.7 ಮತದಾನ ನಡೆದಿತ್ತು.

ಕೆಲವೊಂದು ಸಣ್ಣಪುಟ್ಟ ಅಹಿತಕರ ಘಟನೆ ಹೊರತುಪಡಿಸಿದರೆ ತೆಲಂಗಾಣ ಚುನಾವಣೆಯ ಮತದಾನ ಬಹುತೇಕ ಶಾಂತಿಯುತವಾಗಿತ್ತು.

ರಾಜ್ಯದಾದ್ಯಂತ 35,655 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಚುನಾವಣಾ ಕರ್ತವ್ಯಕ್ಕೆ 2.8 ಲಕ್ಷ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದ್ದ 12,000 ಮತಗಟ್ಟೆಗಳಲ್ಲಿ ಬಿಗಿ ಬಂದೋಬಸ್ತ್‌ ಮಾಡಲಾಗಿತ್ತು.

ಇದೇ ಡಿಸೆಂಬರ್ 3 ರಂದು ಭಾನುವಾರ ಮತ ಎಣಿಕೆ ನಡೆಯಲಿದ್ದು ಮತಗಟ್ಟೆಯ ಬಹುತೇಕ ಸಮೀಕ್ಷೆಗಳು ತೆಲಗಾಂಣದಲ್ಲಿ ಈ ಸಾರಿ ಕಾಂಗ್ರೆಸ್ ಅಧಿಕಾರ ಹಿಡಿಯಬಹುದು ಎಂದು ಭವಿಷ್ಯ ನುಡಿದಿವೆ.

ಬಿಆರ್‌ಎಸ್‌ ಪಕ್ಷ ಸತತ ಮೂರನೇ ಬಾರಿ ಅಧಿಕಾರಕ್ಕೇರುವ ಪ್ರಯತ್ನ ನಡೆಸಿದ್ದರೆ, ಈ ಪಕ್ಷವನ್ನು ಅಧಿಕಾರದಿಂದ ಕೆಳಗಿಳಿಸಲು ಕಾಂಗ್ರೆಸ್ ಸತತ ಹೋರಾಟ ನಡೆಸಿದೆ. ಬಿಆರ್‌ಎಸ್‌ 2014 ರಿಂದಲೂ ಇಲ್ಲಿ ಅಧಿಕಾರದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT