ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲ್ವರು ಅಪ್ರಾಪ್ತರು ಸೇರಿ 10 ನಕ್ಸಲರು ಶರಣು

Published 29 ಮೇ 2024, 16:02 IST
Last Updated 29 ಮೇ 2024, 16:02 IST
ಅಕ್ಷರ ಗಾತ್ರ

ದಾಂತೇವಾಡ: ಛತ್ತೀಸಗಢದ ದಾಂತೇವಾಡ ಜಿಲ್ಲೆಯಲ್ಲಿ ಅಪ್ರಾಪ್ತ ವಯಸ್ಸಿನ ನಾಲ್ವರು ಸೇರಿದಂತೆ 10 ನಕ್ಸಲರು ಬುಧವಾರ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

ಶರಣಾದ ನಕ್ಸಲರು ನಾರಾಯಣಪುರ ಜಿಲ್ಲೆಯ ರೇಖವಾಯ ಗ್ರಾಮಸ್ಥರಾಗಿದ್ದು, ದಕ್ಷಿಣ ಬಸ್ತಾರ್ ಪ್ರಾಂತ್ಯದ ಮಾವೋವಾದಿ ಇಂದ್ರವತಿ ಸಮಿತಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ದಾಂತೇವಾಡ ಪೊಲೀಸ್ ವರಿಷ್ಠಾಧಿಕಾರಿ ಗೌರವ್ ರಾಯ್ ತಿಳಿಸಿದ್ದಾರೆ. 

ಹಿರಿಯ ಪೊಲೀಸ್ ಮತ್ತು ಸಿಆರ್‌ಪಿಎಫ್ ಅಧಿಕಾರಿಗಳ ಎದುರು ಹಾಜರಾದ ಅವರು, ಹಿಂಸಾಚಾರ ತ್ಯಜಿಸಿ ‘ನಿಮ್ಮ ಮನೆಗೆ ಹಿಂದಿರುಗಿ’ ಅಭಿಯಾನದಿಂದ ತಾವು ಪ್ರಭಾವಿತರಾಗಿದ್ದು, ಮಾವೋವಾದಿ ಸಿದ್ಧಾಂತದಿಂದ ಬೇಸರವಾಗಿದೆ ಎಂದು ಹೇಳಿದ್ದಾರೆ. 

ಇವರಿಗೆ ರಸ್ತೆಯನ್ನು ಅಗೆಯುವುದು, ರಸ್ತೆಗಳಿಗೆ ಅಡ್ಡಲಾಗಿ ಮರಗಳನ್ನು ಬೀಳಿಸುವುದು ಮತ್ತು ನಕ್ಸಲರು ಬಂದ್‌ಗೆ ಕರೆಕೊಟ್ಟಾಗ ಬ್ಯಾನರ್ ಮತ್ತು ಪೋಸ್ಟರ್ ಅಂಟಿಸುವ ಕೆಲಸವನ್ನು ನಿಯೋಜಿಸಲಾಗಿತ್ತು. ಶರಣಾಗಿರುವ ಇವರಿಗೆ ತಲಾ ₹25,000 ಸಹಾಯಧನ ಮತ್ತು ಪುನರ್ವಸತಿ ಕಲ್ಪಿಸಿಕೊಡಲಾಗುವುದು ಎಂದು ಅವರು ತಿಳಿಸಿದ್ದಾರೆ. 

ಈ ಮೂಲಕ 2020ರ ಜೂನ್ ತಿಂಗಳಿನಲ್ಲಿ ಆರಂಭಿಸಲಾದ ‘ನಿಮ್ಮ ಮನೆಗೆ ಹಿಂದಿರುಗಿ’ ಎಂಬ ಅಭಿಯಾನದ ಮೂಲಕ ಈವರೆಗೆ ಒಟ್ಟು 815 ನಕ್ಸಲರು ಹಿಂಸಾಚಾರ ತ್ಯಜಿಸಿ ಮುಖ್ಯವಾಹಿನಿಗೆ ಬಂದಿದ್ದಾರೆ. ಇದರಲ್ಲಿ 180 ಮಂದಿಯ ತಲೆಗೆ ಇನಾಮು ಘೋಷಿಸಲಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT