ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಠಾಣೆ | ಬಾಲಕಿ ಮೇಲೆ ಅತ್ಯಾಚಾರ: ತಪ್ಪಿತಸ್ಥನಿಗೆ 10 ವರ್ಷ ಜೈಲು

Published 5 ಜೂನ್ 2024, 14:29 IST
Last Updated 5 ಜೂನ್ 2024, 14:29 IST
ಅಕ್ಷರ ಗಾತ್ರ

ಠಾಣೆ: 2015ರಲ್ಲಿ 9 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಭಾಗಿಯಾದ ತಪ್ಪಿತಸ್ಥನಿಗೆ ಮಹಾರಾಷ್ಟ್ರದ ಠಾಣಾ ಜಿಲ್ಲೆಯ ನ್ಯಾಯಾಲಯವೊಂದು 10 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿದೆ. ಅಲ್ಲದೆ, ₹5000 ದಂಡ ಕೂಡ ವಿಧಿಸಲಾಗಿದೆ. 

ದಂಡದ ಮೊತ್ತವನ್ನು ಸಂತ್ರಸ್ತೆಗೆ ನೀಡಬೇಕು ಎಂದಿರುವ ನ್ಯಾಯಾಲಯವು, ಸಂತ್ರಸ್ತೆಗೆ ಮತ್ತಷ್ಟು ನೆರವು ದೊರೆಯುವಂತೆ ಮಾಡಲು ಈ ಪ್ರಕರಣವನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಶಿಫಾರಸು ಮಾಡಿತು. 

ಅಪರಾಧಿಗೆ ನೀಡುವ ಶಿಕ್ಷೆಯು ಇಂಥ ಹೀನ ಕೃತ್ಯದಲ್ಲಿ ಭಾಗಿಯಾಗುವವರಿಗೆ ಕಠಿಣ ಸಂದೇಶ ನೀಡುವಂತಿರಬೇಕು ಎಂದು ಪೋಕ್ಸೊ ಪ್ರಕರಣಗಳ ಕುರಿತು ವಿಚಾರಣೆ ನಡೆಸುವ ವಿಶೇಷ ನ್ಯಾಯಾಧೀಶ ಡಿ.ಎಸ್. ದೇಶಮುಖ್ ಅವರು ಮೇ 25ರಂದು ಆದೇಶಿಸಿದ್ದು, ಅದರ ಆದೇಶ ಪ್ರತಿಯು ಬುಧವಾರ ಲಭ್ಯವಾಗಿದೆ. 

2015ರ ಜುಲೈ 11ರಂದು ಬಾಲಕಿಯು ಟಿ.ವಿ. ನೋಡಲು ಪಕ್ಕದ ಮನೆಯಲ್ಲಿದ್ದ ಆರೋಪಿಯ ಮನೆಗೆ ಹೋಗಿದ್ದಳು. ಆಗ ಬಾಲಕಿಯ ಪೋಷಕರು ಮಗಳಿಗಾಗಿ ಸುತ್ತಮುತ್ತ ಹುಡುಕಾಡಿದ್ದರು. ಆ ಬಳಿಕ ಆರೋಪಿಯ ಮನೆಯಿಂದ ಅಳುತ್ತಾ ಬಂದಿದ್ದ ಬಾಲಕಿಯು, ಆರೋಪಿಯ ಕೃತ್ಯವನ್ನು ಪೋಷಕರಿಗೆ ತಿಳಿಸಿದ್ದಳು ಎಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ನ್ಯಾಯಾಲಯಕ್ಕೆ ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT