ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಲಿಸುತ್ತಿದ್ದ ರೈಲಿಗೆ ಬಡಿದ ಡ್ರಿಲ್ಲಿಂಗ್‌ ಮಷಿನ್‌ ರೀಮರ್‌: ಮೂವರಿಗೆ ಗಾಯ

Published 19 ಮೇ 2024, 13:20 IST
Last Updated 19 ಮೇ 2024, 13:20 IST
ಅಕ್ಷರ ಗಾತ್ರ

ರಾಯಪುರ: ಚಲಿಸುತ್ತಿದ್ದ ರೈಲಿಗೆ ಡ್ರಿಲ್ಲಿಂಗ್‌ ಮಷಿನ್‌ನ ರೀಮರ್‌ ಬಡಿದು ರೈಲು ಸ್ವಚ್ಛತಾ ಸಿಬ್ಬಂದಿ ಸೇರಿ ಮೂವರು ಗಾಯಗೊಂಡ ಘಟನೆ ಛತ್ತೀಸಗಢದ ಹೊರವಲಯದ ರಾಯಪುರದಲ್ಲಿ ನಡೆದಿದೆ. 

ಶಾಲಿಮಾರ್‌ ಎಕ್ಸ್‌ಪ್ರೆಸ್‌ ರೈಲು ರಾಯಪುರದ ಉರ್ಕುರಾ ನಿಲ್ದಾಣದಿಂದ ಬೆಳಿಗ್ಗೆ 10 ಗಂಟೆಯ ಹೊತ್ತಿಗೆ ಲೋಕಮಾನ್ಯ ತಿಲಕ್‌(ಮುಂಬೈ) ನಿಲ್ದಾಣಕ್ಕೆ ಸಾಗುತ್ತಿತ್ತು.

ರೈಲು ಹಳಿಯಿರುವ ಬಳಿ ರಾಜ್ಯ ವಿದ್ಯುತ್‌ ಕಂಪನಿ ಡ್ರಿಲ್ಲಿಂಗ್‌ ಕೆಲಸ ಮಾಡುತ್ತಿತ್ತು. ರೈಲು ಸಾಗುವ ವೇಳೆ ಡ್ರಿಲ್ಲಿಂಗ್‌ ಮಷಿನ್‌ನಿಂದ ರೀಮರ್‌ ಹಾರಿಹೋಗಿ ರೈಲಿನ ಎಸಿ ಬೋಗಿಯ (B4, B5 ಮತ್ತು B6) ಕಿಟಕಿಗೆ ಬಡಿದಿದೆ. ಪರಿಣಾಮ ಅಲ್ಲಿದ್ದ ಮೂವರು ಗಾಯಗೊಂಡಿದ್ದಾರೆ. ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಮೊದಲು ವಿದ್ಯುತ್‌ ಕಂಬ ಬಿದ್ದಿದೆ ಎಂದು ಭಾವಿಸಲಾಗಿತ್ತು, ಆದರೆ ತನಿಖೆಯ ಬಳಿಕ ಲೋಹದ ತುಂಡು ಕಂಡುಬಂದ ಹಿನ್ನೆಲೆ ಡ್ರಿಲ್‌ ಮಷಿನ್‌ನ ರೀಮರ್‌ ಎಂದು ತಿಳಿದುಬಂದಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.

ರಾಜ್ಯ ವಿದ್ಯುತ್ ಇಲಾಖೆಯು ಅನಧಿಕೃತ ಕಾಮಗಾರಿ ನಡೆಸುತ್ತಿದ್ದು, ಜೀವಗಳ ಸುರಕ್ಷತೆಗೆ ಧಕ್ಕೆಯಾಗಿದೆ. ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT