ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸುರಂಗದಿಂದ ಹೊರಬಂದ ಕಾರ್ಮಿಕರಿಗೆ ತಲಾ ₹ 1 ಲಕ್ಷ ಚೆಕ್‌ ವಿತರಿಸಿದ ಸಿ.ಎಂ

Published 29 ನವೆಂಬರ್ 2023, 13:37 IST
Last Updated 29 ನವೆಂಬರ್ 2023, 13:37 IST
ಅಕ್ಷರ ಗಾತ್ರ

ಉತ್ತರಕಾಶಿ: ಸಿಲ್ಕ್ಯಾರಾ ಸುರಂಗದಿಂದ ರಕ್ಷಿಸಲಾದ ಕಾರ್ಮಿಕರನ್ನು ಚಿನ್ಯಾಲಿಸೌರ್‌ದಲ್ಲಿನ ಆಸ್ಪತ್ರೆಯಲ್ಲಿ ಬುಧವಾರ ಭೇಟಿ ಮಾಡಿದ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ ಅವರು ಪ್ರತಿಯೊಬ್ಬರಿಗೂ ₹ 1 ಲಕ್ಷ ಮೊತ್ತದ ಚೆಕ್‌ ವಿತರಿಸಿದರು.

ಆಸ್ಪತ್ರೆಯ ಹೊರಭಾಗದಲ್ಲಿ ಕಾಯುತ್ತಿದ್ದ ಕಾರ್ಮಿಕರ ಕುಟುಂಬ ಸದಸ್ಯರೊಂದಿಗೆ ಅವರು ಮಾತುಕತೆ ನಡೆಸಿದರು. ಆಸ್ಪತ್ರೆಯಲ್ಲಿ ಎಲ್ಲಾ ಕಾರ್ಮಿಕರ ಹಾಸಿಗೆ ಬಳಿ ತೆರಳಿ ಅವರನ್ನು ಮಾತನಾಡಿಸಿ ಚೆಕ್‌ ವಿತರಣೆ ಮಾಡಿದರು. 

ಯಂತ್ರದ ನೆರವಿಲ್ಲದೆ ಸುರಂಗ ಕೊರೆದ ಕಾರ್ಮಿಕರಿಗೂ ತಲಾ ₹ 50,000 ಬಹುಮಾನ ಘೋಷಿಸಿದರು. ‘ಕಾರ್ಮಿಕರು ಸುರಕ್ಷಿತವಾಗಿ ಹೊರಬಂದ ಬಗ್ಗೆ ನನಗೆ ಅವರ ಕುಟುಂಬದವರಷ್ಟೇ ಸಂತೋಷವಾಗಿದೆ. ಕಾರ್ಮಿಕರು ನನ್ನ ಕುಟುಂಬದವರು ಇದ್ದಂತೆಯೇ. ಅವರು ದೇಶಕ್ಕಾಗಿ, ನಮಗಾಗೇ ಕೆಲಸ ಮಾಡುತ್ತಿದ್ದಾರೆ’ ಎಂದು ಧಾಮಿ ಹೇಳಿದರು.

ಬೃಹತ್‌ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಅನೇಕ ಏಜೆನ್ಸಿಗಳು, ದೇಶದ ಮತ್ತು ಅಂತರರಾಷ್ಟ್ರೀಯ ಪರಿಣತರು, ನಿರಂತರ ಬೆಂಬಲ, ಮಾರ್ಗದರ್ಶನ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ  ಧನ್ಯವಾದ ಹೇಳಿದರು.

‘ಮುಖ್ಯಮಂತ್ರಿಯಾಗಿ ನನ್ನ ಅಧಿಕಾರದ ಅವಧಿಯಲ್ಲಿ ಅನೇಕ ಸವಾಲುಗಳನ್ನು ಎದುರಿಸಿದ್ದೇನೆ. ಆದರೆ ಇದು ಅತ್ಯಂತ ಕಠಿಣವಾಗಿತ್ತು’ ಎಂದರು. 

ಸಮತೋಲನ ಅಗತ್ಯ: ಜೀವವಿಜ್ಞಾನ ಮತ್ತು ಅರ್ಥವ್ಯವಸ್ಥೆ ನಡುವೆ ಸಮತೋಲನ ಅಗತ್ಯವಿದೆ. ಎಲ್ಲಾ ಸುರಂಗ ಯೋಜನೆಗಳನ್ನು ಪರಿಶೀಲಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಪುಷ್ಕರ್‌ಸಿಂಗ್‌ ಧಾಮಿ ತಿಳಿಸಿದರು.

41 ಕಾರ್ಮಿಕರನ್ನು ಸುರಂಗದಿಂದ  ಸುರಕ್ಷಿತವಾಗಿ ಹೊರತಂದ ಬಳಿಕ ತಮಗೆ ದೀಪಾವಳಿ ಸೇರಿ ಎಲ್ಲ ಹಬ್ಬವನ್ನು ಆಚರಿಸಿದಂತೆ ಆಯಿತು ಎಂದು ಅವರು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

‘ರಾಜ್ಯದಲ್ಲಿ ಹಲವು ಸುರಂಗ ಯೋಜನೆಗಳ ಕಾಮಗಾರಿ ನಡೆಯುತ್ತಿದೆ. ಅವುಗಳನ್ನು ಪರಿಶೀಲಿಸಲು ನಿರ್ಧರಿಸಿದ್ದೇವೆ. ನಮಗೆ ಅಭಿವೃದ್ಧಿ ಬೇಕು. ಆದರೆ ಪರಿಸರ ಮತ್ತು ಆರ್ಥಿಕತೆ ನಡುವೆ ಸಮತೋಲನ ಅಗತ್ಯವಿದೆ ಎಂದು ಅಭಿಪ್ರಾಯ ಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT