ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಪ್ರದೇಶ | ‘ಜೈ ಶ್ರೀರಾಮ್’ ಉತ್ತರ: ಇಬ್ಬರು ಪ್ರಾಧ್ಯಾಪಕರ ಅಮಾನತು

Published 27 ಏಪ್ರಿಲ್ 2024, 16:16 IST
Last Updated 27 ಏಪ್ರಿಲ್ 2024, 16:16 IST
ಅಕ್ಷರ ಗಾತ್ರ

ಜೌನಪುರ: ಹಲವು ಪ್ರಶ್ನೆಗಳಿಗೆ ಉತ್ತರದ ಭಾಗವಾಗಿ ‘ಜೈ ಶ್ರೀರಾಮ್’ ಎಂದು, ಭಾರತ ಕ್ರಿಕೆಟ್ ತಂಡದ ಆಟಗಾರರ ಹೆಸರುಗಳನ್ನು ಬರೆದು ನಾಲ್ಕು ಮಂದಿ ವಿದ್ಯಾರ್ಥಿಗಳು ಶೇಕಡ 56ರಷ್ಟು ಅಂಕಗಳೊಂದಿಗೆ ತೇರ್ಗಡೆ ಆಗಿರುವುದು ಆರ್‌ಟಿಐ ಅಡಿ ಪಡೆದ ಮಾಹಿತಿಯ ಮೂಲಕ ಗೊತ್ತಾಗಿತ್ತು. ಇದಾದ ನಂತರ ಸರ್ಕಾರಿ ವಿಶ್ವವಿದ್ಯಾಲಯವೊಂದರ ಇಬ್ಬರು ಪ್ರಾಧ್ಯಾಪಕರನ್ನು ಅಮಾನತು ಮಾಡಲಾಗಿದೆ.

ಡಾ. ಆಶುತೋಷ್ ಗುಪ್ತ ಮತ್ತು ಡಾ. ವಿನಯ್ ವರ್ಮ ಅವರು ತಪ್ಪಾಗಿ ಮೌಲ್ಯಮಾಪನ ನಡೆಸಿರುವ ಕಾರಣ ಅವರನ್ನು ಅಮಾನತು ಮಾಡಲಾಗಿದೆ ಎಂದು ವೀರ್ ಬಹಾದ್ದೂರ್ ಸಿಂಗ್ ಪೂರ್ವಾಂಚಲ ವಿಶ್ವವಿದ್ಯಾಲಯದ ಕುಲಪತಿ ಡಾ. ವಂದನಾ ಸಿಂಗ್ ತಿಳಿಸಿದ್ದಾರೆ.

ಮೊದಲ ವರ್ಷದ ನಾಲ್ವರು ವಿದ್ಯಾರ್ಥಿಗಳಿಂದ ಈ ಪ್ರಾಧ್ಯಾಪಕರು ಹಣ ವಸೂಲು ಮಾಡಿದ್ದಾರೆ ಎಂಬ ಆರೋಪದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಸಿಂಗ್ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT