ವಾಷಿಂಗ್ಟನ್: ರಷ್ಯಾದಿಂದ ಭಾರತವು ಖರೀದಿಸುತ್ತಿರುವ ಎಸ್––400 ಕ್ಷಿಪಣಿ ರಕ್ಷಣಾ ವ್ಯವಸ್ಥೆಗೆ ಸಿಎಎಟಿಎಸ್ಎ (CAATSA-ನಿರ್ಬಂಧಗಳ ಮೂಲಕ ಅಮೆರಿಕದ ವಿರೋಧಿಗಳನ್ನು ಎದುರಿಸುವ ಕಾಯ್ದೆ) ಕಾಯ್ದೆಯಿಂದ ವಿನಾಯಿತಿ ನೀಡುವ ತಿದ್ದುಪಡಿ ಮಸೂದೆಗೆ ಅಮೆರಿಕದ ಪ್ರಜಾ ಪ್ರತಿನಿಧಿ ಸಭೆಯಲ್ಲಿ ಧ್ವನಿಮತದ ಮೂಲಕ ಗುರುವಾರ ಅಂಗೀಕಾರ ಸಿಕ್ಕಿದೆ.

ಭಾರತೀಯ-ಅಮೇರಿಕನ್ ಕಾಂಗ್ರೆಸ್ ಸದಸ್ಯ ರೋ ಖನ್ನಾ ಅವರು ತಿದ್ದುಪಡಿ ಮಸೂದೆ ಮಂಡಿಸಿದರು. ಈ ತಿದ್ದುಪಡಿ ಕಾಯ್ದೆಯು ಚೀನಾದಂತಹ ಆಕ್ರಮಣಕಾರರನ್ನು ತಡೆಯಲು ಸಹಾಯ ಮಾಡುವ ನಿಟ್ಟಿನಲ್ಲಿ ಕಾಟ್ಸಾ ವಿನಾಯಿತಿಯನ್ನು ಭಾರತಕ್ಕೆ ಒದಗಿಸಲು ಬೈಡನ್ ಆಡಳಿತಕ್ಕೆ ಅನುವು ಮಾಡಿಕೊಡುತ್ತದೆ.

2014 ರಲ್ಲಿ ಕ್ರೈಮಿಯಾವನ್ನುಸ್ವಾಧೀನಪಡಿಸಿಕೊಂಡ ಮತ್ತು 2016 ರ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಮಧ್ಯಪ್ರವೇಶಿಸಿದ್ದ ರಷ್ಯಾ ಕ್ರಮಕ್ಕೆ ಪ್ರತಿಯಾಗಿ ಆ ದೇಶದಿಂದ ಪ್ರಮುಖ ರಕ್ಷಣಾ ಯಂತ್ರಾಂಶವನ್ನು ಖರೀದಿಸುವ ದೇಶಗಳ ಮೇಲೆ ನಿರ್ಬಂಧಗಳನ್ನು ವಿಧಿಸಲು ಅಮೆರಿಕ ಆಡಳಿತಕ್ಕೆ ಅಧಿಕಾರ ನೀಡುವ ಕಠಿಣ ಕಾನೂನಾಗಿದೆ.

‘ಚೀನಾದಿಂದ ಹೆಚ್ಚುತ್ತಿರುವ ಆಕ್ರಮಣವನ್ನು ಎದುರಿಸುತ್ತಿರುವ ಭಾರತದೊಂದಿಗೆ ಅಮೆರಿಕ ನಿಲ್ಲಬೇಕು. ಭಾರತ ಕಾಕಸ್ನ ಉಪಾಧ್ಯಕ್ಷನಾಗಿ, ನಾನು ನಮ್ಮ ದೇಶಗಳ ನಡುವಿನ ಪಾಲುದಾರಿಕೆಯನ್ನು ಬಲಪಡಿಸಲು ಮತ್ತು ಭಾರತೀಯ ಚೀನಾದ ಗಡಿಯಲ್ಲಿ ಭಾರತವು ತನ್ನನ್ನು ತಾನು ರಕ್ಷಿಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಕೆಲಸ ಮಾಡುತ್ತಿದ್ದೇನೆ’ಎಂದು ಸಂಸದ ರೋ ಖನ್ನಾ ಹೇಳಿದರು.

'ಈ ತಿದ್ದುಪಡಿಯು ಅತ್ಯಂತ ಮಹತ್ವದ್ದಾಗಿದೆ ಮತ್ತು ಸದನವನ್ನು ಅಂಗೀಕರಿಸಿದ್ದನ್ನು ಕಂಡು ಹೆಮ್ಮೆಯಾಗಿದೆ’ಎಂದು ಅವರು ಹೇಳಿದರು.

2017ರಲ್ಲಿ ಈ ಕಾನೂನನ್ನು ಜಾರಿಗೆ ತರಲಾಗಿದ್ದು, ರಷ್ಯಾದ ರಕ್ಷಣಾ ಮತ್ತು ಗುಪ್ತಚರ ಕ್ಷೇತ್ರಗಳೊಂದಿಗೆ ವಹಿವಾಟುಗಳಲ್ಲಿ ತೊಡಗಿರುವ ಯಾವುದೇ ದೇಶದ ವಿರುದ್ಧ ಅಮೆರಿಕ ಸರ್ಕಾರವು ದಂಡನಾತ್ಮಕ ಕ್ರಮಗಳನ್ನು ಕೈಗೊಳ್ಳಲು ಇದು ಅನುವು ಮಾಡಿಕೊಡುತ್ತದೆ.

ಅಕ್ಟೋಬರ್ 2018 ರಲ್ಲಿ, ಎಸ್-400 ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಗಳ ಐದು ಘಟಕಗಳನ್ನು ಖರೀದಿಸಲು ಭಾರತವು ರಷ್ಯಾದೊಂದಿಗೆ 5 ಶತಕೋಟಿ ಡಾಲರ್ ಒಪ್ಪಂದಕ್ಕೆ ಸಹಿ ಹಾಕಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.