ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದ್ರಯಾನ–3ರ ದತ್ತಾಂಶಕ್ಕೆ ಕಾಯುತ್ತಿವೆ ಅಮೆರಿಕ, ರಷ್ಯಾ: ಸಚಿವ ಜಿತೇಂದ್ರ ಸಿಂಗ್‌

Published 11 ನವೆಂಬರ್ 2023, 14:08 IST
Last Updated 11 ನವೆಂಬರ್ 2023, 14:08 IST
ಅಕ್ಷರ ಗಾತ್ರ

ಜಮ್ಮು(ಪಿಟಿಐ): ಚಂದ್ರಯಾನ–3 ಮತ್ತು ಆದಿತ್ಯ ಎಲ್‌–1 ಯೋಜನೆಗಳ ಮೂಲಕ ಸಂಗ್ರಹಿಸಿರುವ ದತ್ತಾಂಶಗಳನ್ನು ಭಾರತವು ಹಂಚಿಕೊಳ್ಳುವುದಕ್ಕಾಗಿ ಅಮೆರಿಕ ಮತ್ತು ರಷ್ಯಾ ಕಾತರದಿಂದ ಕಾಯುತ್ತಿವೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್‌ ಶನಿವಾರ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಬಾಹ್ಯಾಕಾಶ ವಲಯದಲ್ಲಿ ಖಾಸಗಿ ಸಹಭಾಗಿತ್ವದ ನೀತಿಯನ್ನೂ ಅವರು ಪ್ರಶಂಸಿಸಿದ್ದಾರೆ.

ಚಂದ್ರಯಾನ–3 ಮತ್ತು ಆದಿತ್ಯ ಎಲ್‌–1 ಯೋಜನೆಗಳು ಭಾರತದ ವೇಗದ ಅಭಿವೃದ್ಧಿಯ ಸಂಕೇತವಾಗಿದೆ ಎಂದೂ ಬಣ್ಣಿಸಿದ್ದಾರೆ.

ಚಂದ್ರನ ವಾತಾವರಣ, ಅಲ್ಲಿನ ಖನಿಜಗಳು ಮತ್ತು ಉಷ್ಣ ಪರಿಸ್ಥಿತಿಗಳ ಕುರಿತು ಚಂದ್ರಯಾನ–3 ದತ್ತಾಂಶಗಳನ್ನು ಸಂಗ್ರಹಿಸುತ್ತಿದೆ ಎಂದು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT