ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಣದ ಅಕ್ರಮ ವರ್ಗಾವಣೆ ಪ್ರಕರಣ: ಶಹಜಹಾನ್ ಶೇಖ್ ವಿರುದ್ಧ ಇ.ಡಿ ಆರೋಪಪಟ್ಟಿ ಸಲ್ಲಿಕೆ

Published 30 ಮೇ 2024, 14:19 IST
Last Updated 30 ಮೇ 2024, 14:19 IST
ಅಕ್ಷರ ಗಾತ್ರ

ನವದೆಹಲಿ: ಹಣದ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ತನಿಖೆ ಭಾಗವಾಗಿ, ಅಮಾನತುಗೊಂಡಿರುವ ಟಿಎಂಸಿ ನಾಯಕ, ಪಶ್ಚಿಮ ಬಂಗಾಳದ ಶಹಜಹಾನ್‌ ಶೇಖ್, ಆತನ ಸಹೋದರ ಹಾಗೂ ಇಬ್ಬರು ಸಹಚರರ ವಿರುದ್ಧ ಮೊದಲ ಆರೋಪಪಟ್ಟಿ ಸಲ್ಲಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ(ಇ.ಡಿ) ಗುರುವಾರ ತಿಳಿಸಿದೆ.

ಶಹಜಹಾನ್‌ ಶೇಖ್‌ ಸಹೋದರ ಶೇಖ್‌ ಆಲಂಗಿರ್ ಹಾಗೂ ಶಿವಪ್ರಸಾದ್ ಹಜ್ರಾ ಮತ್ತು ದೀದಾರ್ ಬಕ್ಷ್‌ ಮೊಲ್ಲ ಎಂಬುವವರ ಹೆಸರುಗಳನ್ನು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ಜಾರಿ ನಿರ್ದೇಶನಾಲಯವು ಶೀಘ್ರವೇ ಪೂರಕ ಆರೋಪಪಟ್ಟಿಯನ್ನು ಸಲ್ಲಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ಕೋಲ್ಕತ್ತದಲ್ಲಿರುವ ಪಿಎಂಎಲ್‌ಎ ವಿಶೇಷ ನ್ಯಾಯಾಲಯಕ್ಕೆ ಇ.ಡಿ ಆರೋಪ ಪಟ್ಟಿ ಸಲ್ಲಿಸಿದೆ.  

‘ಶಹಜಹಾನ್‌, ಭೂಕಬಳಿಕೆ, ಅಕ್ರಮ ಮೀನುಗಾರಿಕೆ/ವ್ಯಾಪಾರ ಸೇರಿದಂತೆ ಕ್ರಿಮಿನಲ್‌ ಸಾಮ್ರಾಜ್ಯ ನಿರ್ಮಿಸಿದ್ದಾನೆ. ಈ ಅಕ್ರಮಗಳ ಜೊತೆಗೆ, ಇಟ್ಟಿಗೆ ತಯಾರಿಸುವ ಪ್ರದೇಶಗಳ ಕಬಳಿಕೆ, ಗುತ್ತಿಗೆಗಳನ್ನು ನಿಯಂತ್ರಿಸುವ ಕೂಟ ರಚನೆ, ಕಾನೂನುಬಾಹಿರ ತೆರಿಗೆ ಸಂಗ್ರಹ, ಜಮೀನುಗಳ ಪರಭಾರೆಯಲ್ಲಿ ಕಮಿಷನ್‌ ಪಡೆಯುವಂತಹ ಚಟುವಟಿಕೆಗಳ ಸುತ್ತಲೇ ಈ ಕ್ರಿಮಿನಲ್‌ ಸಾಮ್ರಾಜ್ಯ ಗಿರಕಿ ಹೊಡೆಯುತ್ತದೆ’ ಎಂದು ಆರೋಪಪಟ್ಟಿಯಲ್ಲಿ ಇ.ಡಿ ಆರೋಪಿಸಿದೆ.

ಬೇರೆ ಪ್ರಕರಣಗಳಿಗೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ಸಿಬಿಐ ಕೂಡ, ಶೇಖ್‌ ಹಾಗೂ ಇತರರ ವಿರುದ್ಧ ಇದೇ ವಾರ ಆರೋಪ ಪಟ್ಟಿ ಸಲ್ಲಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT