ನವದೆಹಲಿ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ (ಎಬಿವಿಪಿ) ಖಾತೆಗಳನ್ನು ಅಮಾನತು ಮಾಡಿದ್ದ ಟ್ವಿಟರ್ ಸಂಸ್ಥೆ, ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ವ್ಯಕ್ತವಾದ ನಂತರ ಅಮಾನತನ್ನು ಹಿಂಪಡೆದಿದೆ.
ಎಬಿವಿಪಿಯ ಅಧಿಕೃತ ಟ್ವಿಟರ್ ಖಾತೆ @ABVPVoice, ದೆಹಲಿ ರಾಜ್ಯ ಘಟಕದ ಖಾತೆ @ABVPDelhi ಮತ್ತು ಸಂಘಟನೆಯ ರಾಷ್ಟ್ರೀಯ ಕಚೇರಿ ಕಾರ್ಯದರ್ಶಿ ರಾಹುಲ್ ಶರ್ಮ ಹಾಗೂ ರಾಷ್ಟ್ರೀಯ ಮಾಧ್ಯಮ ಸಂಚಾಲಕ ಸಾಕೇತ್ ಬಹುಗುಣ ಅವರ ಖಾತೆಗಳನ್ನು ಗುರುವಾರ ಸಂಜೆ ಅಮಾನತು ಮಾಡಲಾಗಿತ್ತು ಎಂದು ಸಂಘಟನೆಯ ಪ್ರಧಾನ ಕಾರ್ಯದರ್ಶಿ ವಿನಯ್ ಬಿದರೆ ತಿಳಿಸಿದ್ದಾರೆ.