ನವದೆಹಲಿಯಲ್ಲಿ ನಡೆಯುತ್ತಿರುವ 12ನೇ ದೆಹಲಿ ಸುಸ್ಥಿರ ಅಭಿವೃದ್ಧಿ ಶೃಂಗಸಭೆಯಲ್ಲಿ ಮಾತನಾಡಿದ ಸಿಂಗ್ ಅವರು, `ಜಾಗತಿಕ ತಾಪಮಾನ ಏರಿಕೆ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಸಮಸ್ಯೆಯನ್ನು ಬಗೆಹರಿಸುವ ಯತ್ನ ಮಾಡಬೇಕು. ಆದರೆ ಪ್ರಸ್ತುತ ಈ ವಿಚಾರ ಕುರಿತಂತೆ ಜಾಗತಿಕ ಸಮುದಾಯದಲ್ಲಿ ಇಚ್ಛಾಶಕ್ತಿಯ ಕೊರತೆ ಇದ್ದಂತೆ ಕಾಣುತ್ತದೆ~ ಎಂದು ಅಭಿಪ್ರಾಯಪಟ್ಟರು.