ಹೀಗೆ ಸಂಚರಿಸುವಾಗ ತಮ್ಮ ಅನುಭವಗಳನ್ನು ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡುತ್ತಾ ಹೋಗಿದ್ದಾರೆ. ಉತ್ತರದಿಂದ ಪೂರ್ವ, ಪಶ್ಚಿಮದಿಂದ ದಕ್ಷಿಣದ ರಾಜ್ಯಗಳಿಗೆ ಸಂಚರಿಸುತ್ತಾ ನಾನೀಗ ಇಲ್ಲಿಯವರೆಗೆ 6000 ಕಿಮೀ ಕ್ರಮಿಸಿದ್ದೇನೆ, ಇದರಲ್ಲಿ 2600 ಕಿಮೀಗಳನ್ನು ಕಾಲ್ನಡಿಗೆಯಲ್ಲೇ ಕ್ರಮಿಸಿದರೆ 3400 ಕಿಮೀ ಕ್ರಮಿಸಲು ಇತರ ಸಾರಿಗೆ ವ್ಯವಸ್ಥೆಯನ್ನು ಬಳಸಿರುವುದಾಗಿ ಕಿರಣ್ ಟ್ವೀಟ್ ಮಾಡಿದ್ದಾರೆ.