ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಕ್ಕೆ ₹ 171 ಕೋಟಿ ನೆರೆ ಪರಿಹಾರ

Last Updated 24 ಮಾರ್ಚ್ 2017, 14:05 IST
ಅಕ್ಷರ ಗಾತ್ರ
ADVERTISEMENT

ನವದೆಹಲಿ: ಬರ ಮತ್ತು ನೆರೆ ಪರಿಹಾರವನ್ನೂ ಒಳಗೊಂಡಂತೆ ಹತ್ತು ರಾಜ್ಯಗಳಿಗೆ ₹5,201 ಕೋಟಿ ಪ್ರಕೃತಿ ವಿಕೋಪ ಪರಿಹಾರವನ್ನು ಕೇಂದ್ರ ಸರ್ಕಾರ ಮಂಜೂರು ಮಾಡಿದೆ. ಇದರಲ್ಲಿ ಕರ್ನಾಟಕಕ್ಕೆ ನೆರೆ ಪರಿಹಾರವಾಗಿ ₹ 171.69 ಕೋಟಿ ಮಂಜೂರು ಆಗಿದೆ.

ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ನೇತೃತ್ವದ ಉನ್ನತ ಸಮಿತಿಯು ಈ ಪರಿಹಾರವನ್ನು ಮಂಜೂರು ಮಾಡಿದೆ.

ಬರ, ನೆರೆ, ಭೂಕಂಪ ಮತ್ತು ಭೂಕುಸಿತ ಎದುರಿಸಿದ್ದ ಹತ್ತು ರಾಜ್ಯಗಳಿಗೆ ಕೇಂದ್ರದ ತಂಡಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದವು. ಆ ತಂಡಗಳು ನೀಡಿರುವ ವರದಿ ಆಧಾರದ ಮೇಲೆ ಪರಿಹಾರ ಮಂಜೂರು ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

₹ 5,020 ಕೋಟಿ ಪರಿಹಾರದ ಮೊತ್ತದಲ್ಲಿ ₹ 4,980 ಕೋಟಿಯನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಿಂದ ಮತ್ತು ₹ 40 ಕೋಟಿಯನ್ನು ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿನ ಕಾರ್ಯಕ್ರಮದಿಂದ ಒದಗಿಸಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

2016ನೇ ಸಾಲಿನ ನೆರೆ ಪರಿಹಾರವಾಗಿ ₹386.4 ಕೋಟಿ ನೀಡುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಮನವಿ ಸಲ್ಲಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT