ಬೆಂಗಳೂರು: ರೈಲು ಪ್ರಯಾಣಿಕರು ಇನ್ನು ಮುಂದೆ ತಮಗೆ ಬೇಕಾದ ಶುಚಿರುಚಿ ಆಹಾರವನ್ನು ಎಸ್ಎಂಎಸ್ ಮೂಲಕವೇ ಕಾಯ್ದಿರಿಸಬಹುದು. ಗ್ರಾಹಕರು ಇದಕ್ಕಾಗಿ ತಮ್ಮ ಪಿಎನ್ಆರ್ ಸಂಖ್ಯೆಯೊಂದಿಗೆ 51115ಗೆ ಎಸ್ಎಂಎಸ್ ಕಳಿಸಬೇಕು ಎಂದು ಟ್ರಾವೆಲ್ಖಾನಾ ಪ್ರಕಟಣೆ ತಿಳಿಸಿದೆ.
ನವದೆಹಲಿ ವರದಿ: ಈ ತಿಂಗಳ 25ರಂದು ಇ–ಕ್ಯಾಟರಿಂಗ್ಗೆ ಚಾಲನೆ ನೀಡಲಾಗುತ್ತಿದೆ. ಪ್ರಾಯೋಗಿಕವಾಗಿ ಪ್ರಾರಂಭ-ದಲ್ಲಿ ಕೆಲವು ಆಯ್ದ ರೈಲುಗಳಲ್ಲಿ ಮಾತ್ರ ಈ ಅವಕಾಶ ಕಲ್ಪಿಸಲಾಗುತ್ತದೆ.