ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದು ದಿನಕ್ಕೆ 34 ಮಂದಿ ಸಾವು: 2023ರ ಅಪಘಾತಗಳ ಮಾಹಿತಿ ನೀಡಿದ ಎಡಿಜಿಪಿ

Published 15 ಮಾರ್ಚ್ 2024, 4:13 IST
Last Updated 15 ಮಾರ್ಚ್ 2024, 4:13 IST
ಅಕ್ಷರ ಗಾತ್ರ

ಬೆಂಗಳೂರು: '2023ರಲ್ಲಿ ಪ್ರತಿ‌ದಿನ ಅಪಘಾತದಲ್ಲಿ 34 ಮಂದಿ ಮೃತಪಟ್ಟಿದ್ದಾರೆ. ಹಳೇ ವರ್ಷಕ್ಕೆ ಹೋಲಿಸಿದರೆ ಶೇ 5ರಷ್ಟು ಅಪಘಾತಗಳು‌ ಹೆಚ್ಚಾಗಿವೆ' ಎಂದು ಸಂಚಾರ ಮತ್ತು ರಸ್ತೆ ಸುರಕ್ಷತೆ ಎಡಿಜಿಪಿ ಅಲೋಕ್‌ ಕುಮಾರ್ ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಎಕ್ಸ್‌ನಲ್ಲಿ‌ ಪೋಸ್ಟ್ ಪ್ರಕಟಿಸಿರುವ‌ ಅವರು, ಅಪಘಾತಗಳ ಅಂಕಿ-ಅಂಶಗಳನ್ನು ಹಂಚಿಕೊಂಡಿದ್ದಾರೆ.

'ನಿರ್ಲಕ್ಷ್ಯದ‌ ಚಾಲನೆ, ಚಾಲನೆ ಕೌಶಲ ಇಲ್ಲದಿದ್ದರೂ ಚಾಲನೆ ಮಾಡಿದ್ದರಿಂದ, ರಸ್ತೆ ಸರಿ ಇಲ್ಲದಿದ್ದರಿಂದ ಸೇರಿದಂತೆ ವಿವಿಧ ಕಾರಣಗಳಿಂದ ಅಪಘಾತಗಳು ಸಂಭವಿಸಿವೆ' ಎಂದಿದ್ದಾರೆ.

2023ರಲ್ಲಿ 43440 ಅಪಘಾತಗಳು ಸಂಭವಿಸಿದ್ದು, 12327 ಮಂದಿ ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT