ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಚಿವರಿಂದ ರಾಮಭಕ್ತರಿಗೆ ಅವಮಾನ: ಆರ್‌. ಅಶೋಕ ಕಿಡಿ

Published 17 ಜನವರಿ 2024, 15:46 IST
Last Updated 17 ಜನವರಿ 2024, 15:46 IST
ಅಕ್ಷರ ಗಾತ್ರ

ಬೆಂಗಳೂರು: ‘ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಅವರು ಶ್ರೀರಾಮ ಮತ್ತು ಸೀತೆಯರನ್ನು ಟೂರಿಂಗ್‌ ಟಾಕೀಸ್‌ ಬೊಂಬೆಗಳು ಎಂದು ಹೇಳಿರುವುದು, ರಾಮಭಕ್ತರಿಗೆ ಮತ್ತು ಭಕ್ತಿ ಪರಂಪರೆಗೆ ಮಾಡಿರುವ ಅವಮಾನ’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಆರ್‌.ಅಶೋಕ ಹೇಳಿದರು.

‘ದೇವರನ್ನು ಆಟಿಕೆ ಎನ್ನುವ ಮೂಲಕ ಕಾಂಗ್ರೆಸ್‌ ಪಕ್ಷ ಬಾಲಿಶತನ ತೋರಿದೆ. ಮಾತಿನಲ್ಲಿ ಹಿಡಿತವಿಲ್ಲದೇ ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದು ಕಾಂಗ್ರೆಸ್‌ನ ಅವನತಿಗೆ ಕಾರಣವಾಗಲಿದೆ’ ಎಂದು ಅವರು ಸುದ್ದಿಗಾರರ ಜತೆ ಮಾತನಾಡಿ ತಿಳಿಸಿದರು.

‘ಕಾಂಗ್ರೆಸ್‌ನವರಿಗೆ ರಾಮ– ಸೀತೆ ಎಲ್ಲರೂ ಟೂರಿಂಗ್‌ ಟಾಕೀಸ್‌ ಬೊಂಬೆಗಳಂತೆಯೇ ಕಾಣುತ್ತಾರೆ. ಹಿಂದೆ ಇವರೇ ರಾಮನನ್ನು ಕಾಲ್ಪನಿಕ ವ್ಯಕ್ತಿ, ಜನ್ಮ ಪ್ರಮಾಣ ಪತ್ರ ಇಲ್ಲ ಎಂದಿದ್ದರು. ಮುಸ್ಲಿಮರನ್ನು ಮತ ಬ್ಯಾಂಕ್‌ ಮಾಡಿಕೊಂಡು, ಹಿಂದೂಗಳನ್ನು ಎರಡನೇ ದರ್ಜೆ ಪ್ರಜೆಗಳನ್ನಾಗಿಸುವ ಗುಣ ಕಾಂಗ್ರೆಸ್‌ ರಕ್ತದಲ್ಲೇ ಇದೆ. ವಕೀಲರಾಗಿರುವ ಸಿದ್ದರಾಮಯ್ಯ ಅವರೇ ಸುಪ್ರೀಂಕೋರ್ಟ್‌ ತೀರ್ಪಿಗೆ ಬೆಲೆ ಕೊಡುವುದಿಲ್ಲ ಎನ್ನುತ್ತಾರೆ’ ಎಂದು ಅಶೋಕ ಹರಿಹಾಯ್ದರು.

ರಾಮಭಕ್ತರ ಮನಸ್ಸಿಗೆ ನೋವು:

‘ಕಾಂಗ್ರೆಸ್‌ ಮತ್ತು ಕಾಂಗ್ರೆಸ್‌ ಮುಖಂಡರು ತಮ್ಮ ಹೇಳಿಕೆಗಳಿಂದ ಕೋಟ್ಯಂತರ ರಾಮಭಕ್ತರ ಮನಸ್ಸಿಗೆ ನೋವು ಉಂಟು ಮಾಡಿದ್ದಾರೆ’ ಎಂದು ಬಿಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್‌ ಹೇಳಿದರು.

‘ಭಾರತದ ಭಕ್ತಿ ಪರಂಪರೆಯಡಿ ಎಲ್ಲರಲ್ಲೂ ದೈವತ್ವವನ್ನು ನಾವು ಕಾಣುತ್ತೇವೆ. ನಿಸರ್ಗದಲ್ಲಿ ದೈವತ್ವ ನೋಡುವುದು ನಮ್ಮ ಪರಂಪರೆ. ರಾಮ– ಸೀತೆಯರನ್ನು ಗೊಂಬೆಗಳು, ಟೆಂಟ್ ಎನ್ನುವುದು ರಾಜಣ್ಣ ಅವರ ಮನಸ್ಥಿತಿ ಮತ್ತು ಸಂಸ್ಕಾರಕ್ಕೆ ಹಿಡಿದಿರುವ ಕನ್ನಡಿಯಾಗಿದೆ‘ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT