ನ್ಯೂಯಾರ್ಕ್: ನ್ಯೂಜೆರ್ಸಿಯಲ್ಲಿರುವ ಸ್ವಾಮಿ ನಾರಾಯಣ ಮಂದಿರದ ಆವರಣದಲ್ಲಿ ಕಾಮಗಾರಿ ನಡೆಯುತ್ತಿದ್ದ ಸ್ಥಳದಿಂದ ಬಿದ್ದು ಬಾಲಕನೊಬ್ಬ ಮೃತಪಟ್ಟಿದ್ದಾನೆ.
ಪೆನ್ಸಿಲ್ವೇನಿಯಾದ ಹ್ಯಾಟ್ಫೀಲ್ಡ್ನ ಈ ಬಾಲಕ 16 ವರ್ಷವಿದ್ದಾನೆ. 45 ಅಡಿ ಎತ್ತರದಿಂದ ಬಿದ್ದಿದ್ದು, ಹ್ಯಾಮಿಲ್ಟನ್ನ ರಾಬರ್ಟ್ವುಡ್ ಜಾನ್ಸನ್ ವಿಶ್ವವಿದ್ಯಾಲಯದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆತ ಅಲ್ಲಿ ಒಂದು ಗಂಟೆಯ ನಂತರ ಮೃತಪಟ್ಟಿದ್ದಾನೆ. ಬಾಲಕ ಯಾರು ಎಂಬುದನ್ನು ಪೊಲೀಸರು ಬಹಿರಂಗ ಮಾಡಿಲ್ಲ.