ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನ | ಬಲೂಚಿಸ್ತಾನ್ ಪ್ರಾಂತ್ಯದಲ್ಲಿ 5.4 ತೀವ್ರತೆಯ ಭೂಕಂಪ

Published 19 ಮಾರ್ಚ್ 2024, 5:05 IST
Last Updated 19 ಮಾರ್ಚ್ 2024, 5:05 IST
ಅಕ್ಷರ ಗಾತ್ರ

ಕರಾಚಿ: ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಮಂಗಳವಾರ 5.4 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ವರದಿಯಾಗಿದೆ.

ಭೂಕಂಪದ ಕೇಂದ್ರಬಿಂದು ಕ್ವೆಟ್ಟಾದಿಂದ ವಾಯವ್ಯಕ್ಕೆ 150 ಕಿಲೋಮೀಟರ್ ದೂರದಲ್ಲಿ 35 ಕಿ.ಮೀ ಆಳದಲ್ಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಧಿಕೃತ ಮೂಲಗಳ ಪ್ರಕಾರ, ರಾಜಧಾನಿ ಕ್ವೆಟ್ಟಾ, ನೋಶ್ಕಿ, ಚಾಗಿ, ಚಮನ್, ಕಿಲ್ಲಾ ಅಬ್ದುಲ್ಲಾ, ದಲ್ಬಾದಿನ್, ಪಿಶಿನ್ ಪ್ರಾಂತ್ಯದ ಇತರ ಕೆಲವು ಪ್ರದೇಶಗಳಲ್ಲಿ ಭೂಕಂಪದ ಅನುಭವವಾಗಿದೆ. ಅಲ್ಲದೇ ಪಾಕಿಸ್ತಾನ-ಇರಾನ್ ಗಡಿ ಪ್ರದೇಶಗಳಲ್ಲಿಯೂ ಭೂಕಂಪದ ಅನುಭವವಾಗಿದೆ ಎಂದು ಪಾಕಿಸ್ತಾನ ಹವಾಮಾನ ಇಲಾಖೆ ತಿಳಿಸಿದೆ.

ಭೂಕಂಪದಿಂದ ಯಾವುದೇ ಸಾವು ನೋವು ಹಾಗೂ ಆಸ್ತಿಹಾನಿ ಬಗ್ಗೆ ವರದಿಯಾಗಿಲ್ಲ.

ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಈ ಹಿಂದೆ ಹಲವಾರು ಪ್ರಬಲ ಭೂಕಂಪಗಳು ಸಂಭವಿಸಿವೆ. ಇಲ್ಲಿನ ಹರ್ನೈ ಪ್ರದೇಶದಲ್ಲಿ 2021ರ ಅಕ್ಟೋಬರ್‌ನಲ್ಲಿ ಸಂಭವಿಸಿದ ಭೂಕಂಪದಲ್ಲಿ ಸುಮಾರು 40 ಜನರು ಮೃತಪಟ್ಟು, 300 ಜನರು ಗಾಯಗೊಂಡಿದ್ದರು.

2013ರ ಸೆಪ್ಟೆಂಬರ್‌ನಲ್ಲಿ ಬಲೂಚಿಸ್ತಾನ್‌ ಪ್ರಾಂತ್ಯದ ಹಲವು ಪ್ರದೇಶಗಳಲ್ಲಿ 7.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿತ್ತು. ಘಟನೆಯಲ್ಲಿ ಕನಿಷ್ಠ 348 ಮಂದಿ ಸಾವಿಗೀಡಾಗಿದ್ದರು. ಈ ಭೂಕಂಪ ಸಂಭವಿಸಿದ ಎರಡು ದಿನಗಳ ಬಳಿಕ 6.8 ತೀವ್ರತೆಯ ಮತ್ತೊಂದು ಪ್ರಬಲವಾದ ಭೂಕಂಪ ಅಪ್ಪಳಿಸಿತ್ತು. ಇದರಲ್ಲಿ 7 ಜನರು ಮೃತಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT