ಕರಾಚಿ: ಗಡಿ ಪ್ರದೇಶ ಉಲ್ಲಂಘಿಸಿದ ಆರೋಪಕ್ಕಾಗಿ ಬಂಧಿಸಲಾಗಿದ್ದ 68 ಭಾರತೀಯ ಮೀನುಗಾರರನ್ನು ಪಾಕಿಸ್ತಾನ ಶನಿವಾರ ಬಿಡುಗಡೆ ಮಾಡಿದೆ.
ಕರಾಚಿಯ ಜೈಲಿನಲ್ಲಿ ಇರಿಸಲಾಗಿದ್ದ ಇವರನ್ನು ಲಾಹೋರ್ಗೆ ರೈಲಿನಲ್ಲಿ ಕರೆದೊಯ್ಯಲಾಯಿತು. ಬಳಿಕ ವಾಘಾ ಗಡಿಗೆ ಬರಲಿದ್ದು, ಅಲ್ಲಿ ಮೀನುಗಾರರನ್ನು ಭಾರತೀಯ ಅಧಿಕಾರಿಗಳಿಗೆ ಹಸ್ತಾಂತರಿಸುವ ಪ್ರಕ್ರಿಯೆ ನಡೆಯಲಿದೆ.
ಜುಲೈ ತಿಂಗಳಲ್ಲಿ 78 ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡಲಾಗಿತ್ತು. ಕರಾಚಿಯ ಲಾಂಧಿ ಜೈಲಿನಲ್ಲಿ ಇನ್ನೂ 200 ಭಾರತೀಯ ಮೀನುಗಾರರಿದ್ದಾರೆ. ಕಳೆದ ವರ್ಷ ಡಿಸೆಂಬರ್ ಮತ್ತು ಈ ವರ್ಷದ ಜನವರಿಯಲ್ಲಿ ಭಾರತದ ಮೀನುಗಾರರನ್ನು ಪಾಕಿಸ್ತಾನ ಬಿಡುಗಡೆ ಮಾಡಿತ್ತು.