ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದಲ್ಲಿ ಭೂಕಂಪನ; ಅಲುಗಾಡಿಸಿದ ಗಗನಚುಂಬಿ ಕಟ್ಟಡಗಳು

Published 6 ಏಪ್ರಿಲ್ 2024, 14:56 IST
Last Updated 6 ಏಪ್ರಿಲ್ 2024, 14:56 IST
ಅಕ್ಷರ ಗಾತ್ರ

ನ್ಯೂಯಾರ್ಕ್‌: ಅಮೆರಿಕದಲ್ಲಿ ಶುಕ್ರವಾರ ಭೂಕಂಪನ ಸಂಭವಿಸಿದ್ದು, ಅನೇಕ ಗಗನಚುಂಬಿ ಕಟ್ಟಡಗಳು ಮತ್ತು ಸುತ್ತಮುತ್ತಲಿನ ಉಪನಗರಗಳನ್ನು ಅಲುಗಾಡಿಸಿದೆ. ಭೂಕಂಪನದ ಕೇಂದ್ರ ಬಿಂದು ನ್ಯೂಯಾರ್ಕ್‌ ಮತ್ತು ಫಿಲಾಡೆಲ್ಫಿಯಾ ನಗರಗಳ ಮಧ್ಯದಲ್ಲಿದೆ.

ಘಟನೆಯಿಂದಾಗಿ ಅಪಾರ ಪ್ರಮಾಣದ ನಷ್ಟವೇನು ಸಂಭವಿಸಿಲ್ಲ. ಆದರೆ, ಭೂಕಂಪನದ ಅನುಭವವನ್ನು ಹೊಂದಿರದ ಈ ಪ್ರದೇಶದ ಜನರು ಹೆದರಿಕೆಯಲ್ಲಿ ಕಾಲಕಳೆಯುವಂತಾಗಿದೆ.

‘ನ್ಯೂಜೆರ್ಸಿಯ ವೈಟ್‌ಹೌಸ್‌ ಸ್ಟೇಷನ್‌ ಬಳಿ ಅಥವಾ ನ್ಯೂಯಾರ್ಕ್‌ನಿಂದ ಪಶ್ಚಿಮಕ್ಕೆ 72 ಕಿ.ಮೀ. ಮತ್ತು ಫಿಲಡೆಲ್ಫಿಯಾದಿಂದ ಉತ್ತರಕ್ಕೆ 80 ಕಿ.ಮೀ. ದೂರ ಇರುವ ಸ್ಥಳದಲ್ಲಿ ಶುಕ್ರವಾರ ಬೆಳಿಗ್ಗೆ 4.8 ತೀವ್ರತೆಯ ಭೂಕಂಪನ ಸಂಭವಿಸಿದೆ. 42 ಲಕ್ಷಕ್ಕೂ ಹೆಚ್ಚು ಜನರಿಗೆ ಭೂಕಂಪನದ ಅನುಭವವಾಗಿದೆ’ ಎಂದು ಅಮೆರಿಕದ ಭೌಗೋಳಿಕ ಸರ್ವೇಕ್ಷಣಾ ಸಂಸ್ಥೆ ಹೇಳಿದೆ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT