ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನ: ಚುನಾವಣಾ ರಾಜಕೀಯ ಪ್ರವೇಶಿಸಿದ ಆಸಿಫಾ ಭುಟ್ಟೊ

Published 19 ಮಾರ್ಚ್ 2024, 13:43 IST
Last Updated 19 ಮಾರ್ಚ್ 2024, 13:43 IST
ಅಕ್ಷರ ಗಾತ್ರ

ಇಸ್ಲಾಮಾಬಾದ್: ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರ ಕಿರಿಯ ಪುತ್ರಿ ಆಸೀಫಾ ಭುಟ್ಟೊ ಅವರು ರಾಜಕೀಯ ಪ್ರವೇಶಿಸಿದ್ದು, ತಮ್ಮ ತಂದೆ ತೆರವುಮಾಡಿರುವ ಸಿಂಧ್ ಪ್ರಾಂತ್ಯದ ರಾಷ್ಟ್ರೀಯ ಅಸೆಂಬ್ಲಿ ಸ್ಥಾನದ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ.

ಆಸೀಫಾ ಅವರು ಕೆಲವು ಸಮಯದಿಂದ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಆದರೆ ಅವರನ್ನು ತಂದೆ ಜರ್ದಾರಿ ಅವರು ಸಂಸದೀಯ ರಾಜಕಾರಣದಿಂದ ದೂರ ಇರಿಸಿದ್ದರು. 

ಆಸೀಫಾ ಅವರು ಉಪಚುನಾವಣೆಯ ಉಮೇದುವಾರರಾಗಿ ಭಾನುವಾರ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ. ಶಾಹೀದ್ ಬೆಂಜಿರಾಬಾದ್ ಕ್ಷೇತ್ರದಲ್ಲಿ ಜರ್ದಾರಿ ಗೆಲುವು ಸಾಧಿಸಿದ್ದರು. ಆದರೆ ಅಧ್ಯಕ್ಷರಾದ ನಂತರ ಅವರು ಕ್ಷೇತ್ರವನ್ನು ತೆರವು ಮಾಡಬೇಕಾಯಿತು. ಉಪ ಚುನಾವಣೆ ಏಪ್ರಿಲ್‌ 21ಕ್ಕೆ ನಿಗದಿಯಾಗಿದೆ. ಆಸೀಫಾ ಅವರು ಗೆಲುವು ಸಾಧಿಸುವುದು ಖಚಿತ ಎನ್ನಲಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT