ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪಾಕಿಸ್ತಾನ: ಬಂದರು ಕಟ್ಟಡದ ಮೇಲೆ ದಾಳಿ ಮಾಡಿದ 8 ಉಗ್ರರ ‌ಹತ್ಯೆ

Published 20 ಮಾರ್ಚ್ 2024, 15:32 IST
Last Updated 20 ಮಾರ್ಚ್ 2024, 15:32 IST
ಅಕ್ಷರ ಗಾತ್ರ

ಕರಾಚಿ: ‘ಬೃಹತ್‌ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಬಲೂಚ್‌ ಭಯೋತ್ಪಾದಕರು ಬುಧವಾರ ಪಾಕಿಸ್ತಾನದ ಗ್ವಾಡರ್‌ ಬಂದರು ಪ್ರಾಧಿಕಾರ ಸಂಕೀರ್ಣಕ್ಕೆ ನುಗ್ಗಿ ಗುಂಡಿನ ದಾಳಿ ನಡೆಸಿದ್ದು, ಪಾಕಿಸ್ತಾನ ಸೇನೆ ನಡೆಸಿದ ಪ್ರತಿದಾಳಿಗೆ 8 ಭಯೋತ್ಪಾದಕರು ಸಾವಿಗೀಡಾಗಿದ್ದಾರೆ’ ಎಂದು ಮಾಧ್ಯಮವೊಂದು ವರದಿ ಮಾಡಿದೆ.

‘ಬೃಹತ್‌ ಪ್ರಮಾಣದಲ್ಲಿ ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ಸ್ಥಳದಲ್ಲಿ ಜಮಾಯಿಸಿದ್ದು, ಗುಂಡಿನ ಚಕಮಕಿ ನಡೆಯುತ್ತಿದೆ’ ಎಂದು ಡಾನ್‌.ಕಾಮ್‌ ವೆಬ್‌ಸೈಟ್‌ ವರದಿ ಮಾಡಿದೆ. ‘ಬಂದರು ಸಂಕೀರ್ಣದ ಮೇಲಿನ ದಾಳಿಯನ್ನು ಭದ್ರತಾ ಸಿಬ್ಬಂದಿ ನಿಯಂತ್ರಿಸಿದ್ದು, 8 ಭಯೋತ್ಪಾದಕರನ್ನು ಹತ್ಯೆ ಮಾಡಿದ್ದಾರೆ’ ಎಂದು ಎಕ್ಸ್‌ಪ್ರೆಸ್‌ ಟ್ರಿಬ್ಯುನ್‌ ಪತ್ರಿಕೆ ವರದಿ ಮಾಡಿದೆ.

‘ನಿಷೇಧಿತ ಬಲೂಚಿಸ್ತಾನ್‌ ಲಿಬರೇಷನ್‌ ಆರ್ಮಿಯ(ಬಿಎಲ್‌ಎ) ಮಜೀದ್‌ ಬ್ರಿಗೇಡ್‌ ದಾಳಿಯ ಹೊಣೆ ಹೊತ್ತುಕೊಂಡಿದೆ’ ಎಂದು ವರದಿ ತಿಳಿಸಿದೆ.

ಇರಾನ್‌ ಮತ್ತು ಅಫ್ಗಾನಿಸ್ತಾನ ಗಡಿಯಲ್ಲಿರುವ ಬಲೂಚಿಸ್ತಾನವು ದಂಗೆಕೋರರ ನೆಲೆಯಾಗಿದ್ದು, ಬಲೂಚ್‌ ದಂಗೆಕೋರರ ಗುಂಪುಗಳು ಚೀನಾ–ಪಾಕಿಸ್ತಾನ ಆರ್ಥಿಕ ಕಾರಿಡಾರ್‌ ಅನ್ನು ಗುರಿಯಾಗಿಸಿಕೊಂಡು ಈ ಹಿಂದೆ ಹಲವಾರು ದಾಳಿಗಳನ್ನು ನಡೆಸಿವೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT