ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರೆಗೆ ಕುಸಿದ ನಕ್ಷತ್ರದಿಂದ ರಂಧ್ರ: ಅಧ್ಯಯನ

ಅಮೆರಿಕದ ನಾರ್ಥ್‌ವೆಸ್ಟರ್ನ್‌ ವಿಶ್ವವಿದ್ಯಾಲಯದ ಸಂಶೋಧಕರ ಅಧ್ಯಯನ
Last Updated 13 ಜನವರಿ 2019, 18:13 IST
ಅಕ್ಷರ ಗಾತ್ರ

ವಾಷಿಂಗ್ಟನ್‌: 20 ಕೋಟಿ ಜ್ಯೋತಿರ್‌ ವರ್ಷಗಳ ಹಿಂದಿನ ನಿಗೂಢ ಸ್ಫೋಟದಿಂದ ನಕ್ಷತ್ರ ಕುಸಿದು ಕಪ್ಪು ರಂಧ್ರ ಅಥವಾ ನ್ಯೂಟ್ರಾನ್‌ ನಕ್ಷತ್ರ ರಚನೆಗೆ ಕಾರಣವಾಗಿರುವ ಸಾಧ್ಯತೆಗಳಿವೆ ಎಂದು ವಿಜ್ಞಾನಿಗಳು ವಿಶ್ಲೇಷಿಸಿದ್ದಾರೆ.

ಕಳೆದ ಬೇಸಿಗೆಯಲ್ಲಿ ನಿಗೂಢವಾಗಿ ಸ್ಫೋಟವಾದ ಪ್ರಕಾಶಮಾನವಾದ ವಸ್ತುವಿನ ಕುರಿತು ಅಮೆರಿಕದ ನಾರ್ಥ್‌ವೆಸ್ಟರ್ನ್‌ ವಿಶ್ವವಿದ್ಯಾಲಯದ ಸಂಶೋಧಕರು ಅಧ್ಯಯನ ಕೈಗೊಂಡಿದ್ದಾರೆ. ಜೂನ್‌ 17ರಂದು ಹವೈನಲ್ಲಿನ ಎರಡು ದೂರದರ್ಶಕಗಳು ಆಕರ್ಷಕವಾದ ಮತ್ತು ಪ್ರಕಾಶಮಾನವಾದ ವಸ್ತುವನ್ನು ಸೆರೆಹಿಡಿದಿದ್ದವು.

ಈ ವಸ್ತು ದಿಢೀರನೆ ಕಾಣಿಸಿಕೊಂಡು ಮತ್ತೆ ಅತ್ಯಂತ ವೇಗದಲ್ಲಿ ನಾಶವಾಗಿತ್ತು. ಈ ಬಗ್ಗೆ ಕ್ಷ–ಕಿರಣಗಳು ಮತ್ತು ರೇಡಿಯೊ ತರಂಗಗಳು ಸೇರಿದಂತೆ ಸೆರೆಹಿಡಿಯಲಾದ ಚಿತ್ರಗಳ ಬಗ್ಗೆ ವಿಶ್ಲೇಷಣೆ ನಡೆಸಿದಾಗ ನಕ್ಷತ್ರವು ಧರೆಗೆ ಕುಸಿಯುತ್ತಿರುವುದನ್ನೇ ದೂರದರ್ಶಕ ಸೆರೆಹಿಡಿದಿರುವುದು ಎಂದು ತಂಡವು ಅಭಿಪ್ರಾಯಪಟ್ಟಿದೆ. ಇದೇ ರೀತಿಯಲ್ಲೇ ಕಪ್ಪು ರಂಧ್ರ ರಚನೆಗೂ ಕಾರಣವಾಗಿರಬಹುದು ಎಂದು ಈ ತಂಡ ವಿಶ್ಲೇಷಿಸಿದೆ.

‘ಎಟಿ2018ಕೌವ್‌’ ಅಥವಾ ‘ದಿ ಕೌವ್‌’ ಎಂದು ಈ ವಸ್ತುವಿಗೆ ಕರೆಯಲಾಗಿದೆ. ನಕ್ಷತ್ರಗಳು ಈ ರೀತಿ ನಾಶವಾದಾಗ ಕಪ್ಪು ರಂಧ್ರ ಮತ್ತು ನ್ಯೂಟ್ರಾನ್‌ ನಕ್ಷತ್ರಗಳ ರಚನೆಯಾಗಿವೆ. ಮೊದಲ ಬಾರಿ ಈ ನಕ್ಷತ್ರ ಪತ್ತೆಯಾದಾಗ ಸೂಪರ್‌ನೋವಾ ಎಂದು ಭಾವಿಸಲಾಗಿತ್ತು. ಆದರೆ, ಅಧ್ಯಯನ ನಡೆಸಿದಾಗ ವಿಭಿನ್ನ ಮಾಹಿತಿ ದೊರೆಯಿತು’ ಎಂದು ಸಂಶೋಧನೆಯ ನೇತೃತ್ವ ವಹಿಸಿರುವ ನಾರ್ಥ್‌ವೆಸ್ಟರ್ನ್‌ ವಿಶ್ವವಿದ್ಯಾಲಯದ ರಫಾಲ್ಲಾ ಮಾರ್ಗುಟ್ಟಿ ತಿಳಿಸಿದ್ದಾರೆ.

ಈಗ ಪತ್ತೆಯಾಗಿರುವ ನಕ್ಷತ್ರ ಸಾಮಾನ್ಯಕ್ಕಿಂತಲೂ ಹೆಚ್ಚು ಪ್ರಕಾಶಮಾನವಾಗಿತ್ತು. ಸೂಪರ್‌ನೋವಾಗಿಂತಲೂ 10ರಿಂದ 100ಪಟ್ಟು ಹೆಚ್ಚು ಪ್ರಕಾಶಮಾನವಾಗಿತ್ತು. ಜತೆಗೆ, ಇತರ ನಕ್ಷತ್ರಗಳ ಸ್ಫೋಟಕ್ಕಿಂತಲೂ ವಿಭಿನ್ನವಾಗಿತ್ತು. ಅತಿ ವೇಗದಲ್ಲಿ ಕಾಣಿಸಿಕೊಂಡು ಅಷ್ಟೇ ವೇಗದಲ್ಲಿ ನಾಶವಾಯಿತು ಎಂದು ಮಾರ್ಗುಟ್ಟಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT