ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹವಾಮಾನ ಬದಲಾವಣೆ’ ಶೃಂಗಸಭೆ ಯಶಸ್ವಿ: ಭಾರತ

ವಿಶ್ವಸಂಸ್ಥೆ ಆಶ್ರಯದಲ್ಲಿ ಗ್ಲಾಸ್ಗೊದಲ್ಲಿ ನಡೆದ ಜಾಗತಿಕ ಸಮಾವೇಶ
Last Updated 14 ನವೆಂಬರ್ 2021, 13:45 IST
ಅಕ್ಷರ ಗಾತ್ರ

ಗ್ಲಾಸ್ಗೊ: ‘ಹವಾಮಾನ ಬದಲಾವಣೆ ಕುರಿತು ನಡೆದ ಶೃಂಗಸಭೆ (ಸಿಒಪಿ 26 ಶೃಂಗಸಭೆ) ಯಶಸ್ವಿಯಾಗಿದೆ. ಜಾಗತಿಕ ಸಮುದಾದ ಎದುರು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು ತಮ್ಮ ಕಳವಳ ಹಾಗೂ ಚಿಂತನೆಗಳನ್ನು ಒಕ್ಕೊರಲಿನಿಂದ ಮಂಡಿಸುವಲ್ಲಿ ಸಫಲವಾದವು’ ಎಂದು ಭಾರತ ಭಾನುವಾರ ಹೇಳಿದೆ.

ಭಾರತ ನಿಯೋಗದ ನೇತೃತ್ವ ವಹಿಸಿದ್ದ ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್ ಮಾತನಾಡಿ, ‘ಹವಾಮಾನ ಬದಲಾವಣೆಯಿಂದ ಆಗುತ್ತಿರುವ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವುದು ಅಗತ್ಯ. ಅಭಿವೃದ್ಧಿ ಹೊಂದಿದ ದೇಶಗಳಲ್ಲಿನ ಬದಲಾದ ಜೀವನ ಶೈಲಿ, ಭೋಗ ಸಂಸ್ಕೃತಿ ಹೆಚ್ಚಳವೇ ಹವಾಮಾನ ವೈಪರೀತ್ಯಕ್ಕೆ ಕಾರಣ’ ಎಂದರು.

‘ಹವಾಮಾನ ಬದಲಾವಣೆ ತಡೆಗೆ ಸಂಬಂಧಿಸಿ ಬಾರತದ ನಿಲುವನ್ನು ಶೃಂಗಸಭೆಯು ಪ್ರತಿಧ್ವನಿಸಿದೆ. ಶೃಂಗಸಭೆಯಲ್ಲಿ ಭಾರತ ರಚನಾತ್ಮಕ ಚರ್ಚೆಯ ಜೊತೆಗೆ ಪರಿಹಾರಾತ್ಮಕ ಕ್ರಮಗಳನ್ನು ಪ್ರಸ್ತುತಪಡಿಸಿತು’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT