ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನ್ಯೂಯಾರ್ಕ್‌: ಕ್ರಿಪ್ಟೊ ಕರೆನ್ಸಿ ವ್ಯಾಪಾರ- ತಪ್ಪೊಪ್ಪಿಕೊಂಡ ಭಾರತದ ವ್ಯಕ್ತಿ

Last Updated 13 ಸೆಪ್ಟೆಂಬರ್ 2022, 16:15 IST
ಅಕ್ಷರ ಗಾತ್ರ

ನ್ಯೂಯಾರ್ಕ್‌: ಅಮೆರಿಕದಲ್ಲಿ ನಡೆದಿರುವ ಆಂತರಿಕ ಕ್ರಿಪ್ಟೊ ಕರೆನ್ಸಿ ವ್ಯಾಪಾರ ಪ್ರಕರಣದಲ್ಲಿ ತಾನು ಭಾಗಿಯಾಗಿರುವುದಾಗಿ ಭಾರತೀಯ ಸಂಜಾತ ವ್ಯಕ್ತಿಯು ತಪ್ಪೊಪ್ಪಿಕೊಂಡಿದ್ದಾನೆ.

ಸಿಯಾಟಲ್‌ ನಿವಾಸಿ,26 ವರ್ಷದ ನಿಖಿಲ್ ವಹಿ ಸೋಮವಾರ ತಪ್ಪೊಪ್ಪಿಕೊಂಡಿದ್ದಾನೆ.‘ಕಾಯಿನ್‌ಬೇಸ್‌’ಗೆ ಸಂಬಂಧಿಸಿದ ರಹಸ್ಯ ಮಾಹಿತಿಗಳ ಮೂಲಕ ಕ್ರಿಪ್ಟೊ ಕರೆನ್ಸಿ ಸ್ವತ್ತುಗಳನ್ನು ಅಕ್ರಮವಾಗಿ ವ್ಯಾಪಾರ ಮಾಡಿದ, ಆ ಮೂಲಕ ಸುಮಾರು ₹11.92 ಕೋಟಿ ಆದಾಯ ಗಳಿಸಿದ ಆರೋಪ ಈತ ಹಾಗೂ ಇತರ ಇಬ್ಬರ ಮೇಲಿತ್ತು. ಈ ಪ್ರಕರಣದಲ್ಲಿ ಆರೋಪಿಗಳಿಗೆ ಗರಿಷ್ಠ 20 ವರ್ಷ ಜೈಲುಶಿಕ್ಷೆ ವಿಧಿಸಬಹುದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT