ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ: ವೀಸಾ ನಿಷೇಧದಿಂದ ತೊಂದರೆಗೆ ಸಿಲುಕಿದ್ದ ಭಾರತದ ವಿದ್ಯಾರ್ಥಿಗಳ ಜೊತೆ ಸಭೆ

Published 5 ಮೇ 2024, 12:32 IST
Last Updated 5 ಮೇ 2024, 12:32 IST
ಅಕ್ಷರ ಗಾತ್ರ

ಬೀಜಿಂಗ್‌: ಕೋವಿಡ್‌–19 ಪಿಡುಗಿನ ವೇಳೆ ವೀಸಾ ನಿಷೇಧಿಸಿದ್ದ ಚೀನಾದ ಕ್ರಮದಿಂದ ತೊಂದರೆ ಅನುಭವಿಸಿದ್ದ ಭಾರತದ ವಿದ್ಯಾರ್ಥಿಗಳೊಂದಿಗೆ ಇಲ್ಲಿನ ಭಾರತೀಯ ರಾಯಭಾರಿ ಕಚೇರಿ ಮೊದಲ ಬಾರಿಗೆ ಸಂವಾದ ಕಾರ್ಯಕ್ರಮ ಆಯೋಜಿಸಿತ್ತು.

ಚೀನಾದ 13ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳ ಹಳೆಯ ಮತ್ತು ಹೊಸಬರು ಸೇರಿದಂತೆ 80 ವಿದ್ಯಾರ್ಥಿಗಳು ಶನಿವಾರ ನಡೆದ ಸಂವಾದದಲ್ಲಿ ಪಾಲ್ಗೊಂಡಿದ್ದರು.

ಚೀನಾದಲ್ಲಿ ಭಾರತದ ರಾಯಭಾರಿ ಪ್ರದೀಪಕುಮಾರ್‌ ರಾವತ್, ಕೌನ್ಸೆಲರ್ ನಿತಿನ್‌ಜೀತ್‌ ಸಿಂಗ್‌ ಅವರು ವಿದ್ಯಾರ್ಥಿಗಳ ಕುಂದು–ಕೊರತೆ, ಅನುಭವಗಳನ್ನು ಆಲಿಸಿದರು.

ಭಾರತದ ರಾಯಭಾರಿ ಕಚೇರಿ ಒದಗಿಸುವ ವಿವಿಧ ಸೇವೆಗಳ ಕುರಿತು ರಾಯಭಾರ ಕಚೇರಿಯ ಕಾರ್ಯದರ್ಶಿ (ಶಿಕ್ಷಣ) ಅಮಿತ್ ಶರ್ಮ ವಿವರಿಸಿದರು.

ಚೀನಾದಲ್ಲಿ ಸದ್ಯ 10 ಸಾವಿರದಷ್ಟು ಭಾರತೀಯ ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಕೈಗೊಂಡಿದ್ದಾರೆ. ಕೋವಿಡ್‌ ಪಿಡುಗಿಗೂ ಮುನ್ನ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ 23 ಸಾವಿರಕ್ಕೂ ಅಧಿಕವಿತ್ತು. ಬಹುತೇಕ ವಿದ್ಯಾರ್ಥಿಗಳು ವೈದ್ಯಕೀಯ ಕೋರ್ಸ್‌ ಅಧ್ಯಯನ ಕೈಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT