ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ: ಅಗ್ನಿ ಅನಾಹುತದಲ್ಲಿ ಭಾರತ ಮೂಲದ ಪತ್ರಕರ್ತ ಸಾವು

Published 25 ಫೆಬ್ರುವರಿ 2024, 12:48 IST
Last Updated 25 ಫೆಬ್ರುವರಿ 2024, 12:48 IST
ಅಕ್ಷರ ಗಾತ್ರ

ನ್ಯೂಯಾರ್ಕ್: ಮ್ಯಾನ್‌ಹಟನ್‌ನ ಅಪಾರ್ಟ್‌ಮೆಂಟ್‌ವೊಂದರಲ್ಲಿ ಲಿಥಿಯಂ–ಅಯಾನ್ ಬ್ಯಾಟರಿಯಿಂದ ಸಂಭವಿಸಿದ ಅಗ್ನಿ ಅವಘಡದಲ್ಲಿ ಭಾರತ ಮೂಲದ ಪತ್ರಕರ್ತರೊಬ್ಬರು ಮೃತ ಪಟ್ಟಿದ್ದಾರೆ. 

ಮೃತರನ್ನು ಫಾಜಿಲ್ ಖಾನ್ (27) ಎಂದು ಗುರುತಿಸಲಾಗಿದೆ. ಅವರು ಮ್ಯಾನ್‌ಹಟನ್‌ ಪ್ರದೇಶದ ಹರ್ಲೆಮ್‌ ಎಂಬಲ್ಲಿ ಆರು ಹಂತದ ವಸತಿ ಸಮುಚ್ಚಯದಲ್ಲಿ ವಾಸವಿದ್ದರು. ಅಲ್ಲಿ ಕಾಣಿಸಿಕೊಂಡ ಅಗ್ನಿಯು ‘ವಿನಾಶಕಾರಿ’ಯಾಗಿತ್ತು ಎಂದು ನ್ಯೂಯಾರ್ಕ್‌ ನಗರ ಅಗ್ನಿಶಾಮಕ ಇಲಾಖೆ ತಿಳಿಸಿದೆ. ಪ್ರಕರಣದಲ್ಲಿ 17 ಮಂದಿ ಗಾಯಗೊಂಡಿದ್ದಾರೆ.

ಕೊಲಂಬಿಯಾ ಜರ್ನಲಿಸಂ ಸ್ಕೂಲ್‌ನ ಹಳೆಯ ವಿದ್ಯಾರ್ಥಿಯಾಗಿದ್ದ ಫಾಜಿಲ್ ಖಾನ್, ನ್ಯೂಯಾರ್ಕ್ ಮೂಲದ ‘ಹೆಚಿಂಜೆರ್ ರಿಪೋರ್ಟ್’ ಮಾಧ್ಯಮ ಸಂಸ್ಥೆಯಲ್ಲಿ ಡೇಟಾ ರಿಪೋರ್ಟರ್ ಆಗಿ ಕೆಲಸ ಮಾಡುತ್ತಿದ್ದರು.

ನ್ಯೂಯಾರ್ಕ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯು ಖಾನ್ ಕುಟುಂಬದ ಜತೆ ಸಂಪಕರ್ದಲ್ಲಿರುವುದಾಗಿ ತಿಳಿಸಿದ್ದು, ಅವರ ಮೃತದೇಹವನ್ನು ಭಾರತಕ್ಕೆ ತರಲು ಸಾಧ್ಯವಿರುವ ಎಲ್ಲ ನೆರವು ಒದಗಿಸುವುದಾಗಿ ಹೇಳಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT