ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಮೆರಿಕ: ಭಾರತದ ವಿದ್ಯಾರ್ಥಿ ಸಾವು

Published 9 ಜುಲೈ 2024, 12:52 IST
Last Updated 9 ಜುಲೈ 2024, 12:52 IST
ಅಕ್ಷರ ಗಾತ್ರ

ನ್ಯೂಯಾರ್ಕ್‌: ಟ್ರೈನ್ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದ 25 ವರ್ಷದ ಭಾರತೀಯ ವಿದ್ಯಾರ್ಥಿ ನ್ಯೂಯಾರ್ಕ್‌ನ ಅಲ್ಬನಿಯಲ್ಲಿರುವ ಜಲಪಾತದಲ್ಲಿ ಬಿದ್ದು ಮೃತಪಟ್ಟಿದ್ದಾರೆ.

ಮೃತ ವಿದ್ಯಾರ್ಥಿಯನ್ನು ಸಾಯಿ ಸೂರ್ಯ ಅವಿನಾಶ್‌ ಗಡ್ಡೆ ಎಂದು ಗುರುತಿಸಲಾಗಿದೆ. ಜುಲೈ 7ರಂದು ಬಾರ್ಬರ್‌ವಿಲ್ಲೆ ಫಾಲ್ಸ್‌ನಲ್ಲಿ ಬಿದ್ದು, ಅವರು ಮೃತಪಟ್ಟಿದ್ದಾರೆ.

‘ದುಃಖದಲ್ಲಿರುವ ಅವರ ಕುಟುಂಬ ಮತ್ತು ಸ್ನೇಹಿತರಿಗೆ ತೀವ್ರ ಸಂತಾಪಗಳು. ಸಾಯಿ ಸೂರ್ಯ ಅವರ ಪಾರ್ಥಿವ ಶರೀರವನ್ನು ಭಾರತಕ್ಕೆ ಸಾಗಿಸಲು ಅಗತ್ಯವಿರುವ ಎನ್‌ಒಸಿ ವಿತರಣೆ ಸೇರಿದಂತೆ ಕುಟುಂಬಕ್ಕೆ ಅಗತ್ಯ ನೆರವು ನೀಡಲಾಗುವುದು’ ಎಂದು ಭಾರತೀಯ ಕಾನ್ಸುಲೇಟ್ ಜನರಲ್ ‘ಎಕ್ಸ್’ನಲ್ಲಿ ತಿಳಿಸಿದ್ದಾರೆ.

ವರದಿಗಳ ಪ್ರಕಾರ ಸಾಯಿ ಸೂರ್ಯ ಭಾರತದ ತೆಲಂಗಾಣ ರಾಜ್ಯದವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT