ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಇರಾನ್‌ ಅಧ್ಯಕ್ಷ ಸ್ಥಾನದ ಚುನಾವಣೆ: ಮಾಜಿ ಅಧ್ಯಕ್ಷ ಅಹ್ಮದಿ ನೆಜಾದ್ ಸ್ಪರ್ಧೆ

Published 2 ಜೂನ್ 2024, 15:51 IST
Last Updated 2 ಜೂನ್ 2024, 15:51 IST
ಅಕ್ಷರ ಗಾತ್ರ

ದುಬೈ: ಇರಾನ್‌ ಅಧ್ಯಕ್ಷೀಯ ಚುನಾವಣೆಗೆ ಸಂಭವನೀಯ ಅಭ್ಯರ್ಥಿಯಾಗಿ ತೀವ್ರವಾದಿ ನಾಯಕ, ಮಾಜಿ ಅಧ್ಯಕ್ಷ ಮಹಮೂದ್ ಅಹ್ಮದಿನೆಜಾದ್ ಹೊರಹೊಮ್ಮಿದ್ದಾರೆ. ಮಾಜಿ ಅಧ್ಯಕ್ಷರು ಹೆಲಿಕಾಪ್ಟರ್‌ ಅವಘಡದಲ್ಲಿ ಮೃತರಾದ್ದರಿಂದ ತೆರವಾದ ಸ್ಥಾನದ ಆಕಾಂಕ್ಷಿಯಾಗಿದ್ದಾರೆ.

ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಅಹ್ಮದಿನೆಜಾದ್ ಗುರುತಿಸಿಕೊಂಡಿರುವುದು, ಇರಾನ್‌ನ ಪರಮೋಚ್ಚ ನಾಯಕ ಅಯತ್ಒಲ್ಲಾ ಅಲಿ ಖಮೇನಿ ಅವರ ಮೇಲಿನ ಒತ್ತಡ ಹೆಚ್ಚಿಸಿದೆ.

ಹಿಂದೆ ಅಧಿಕಾರದಲ್ಲಿದ್ದಾಗ ಅಹ್ಮದಿನೆಜಾದ್ ಬಹಿರಂಗವಾಗಿ ಖಮೇನಿ ಅವರಿಗೆ ಸವಾಲು ಹಾಕಿದ್ದರು. ಈ ಬೆಳವಣಿಗೆ ಅವರು 2021ರಲ್ಲಿ ಚುನಾವಣೆಗೆ ಸ್ಪರ್ಧಿಸದಂತೆ ನಿರ್ಬಂಧ ಹೇರಲು ಕಾರಣವಾಗಿತ್ತು.

ಇರಾನ್‌ ಮತ್ತು ಪಶ್ಚಿಮ ದೇಶಗಳು ಅಣ್ವಸ್ತ್ರ ಕಾರ್ಯಕ್ರಮವನ್ನು ಚುರುಕುಗೊಳಿಸುತ್ತಿರುವ ಹೊತ್ತಿನಲ್ಲಿಯೇ, ನೇರ, ನಿಷ್ಠುರ ನುಡಿಯ ಹಾಗೂ ಪ್ರಶ್ನಿಸುವ ಮನೋಭಾವದ ರಾಜಕಾರಣಿಯು ಮತ್ತೆ ಸಕ್ರಿಯ ರಾಜಕಾರಣದ ಕೇಂದ್ರಕ್ಕೆ ಮರಳಿರುವುದು ಗಮನಾರ್ಹವಾಗಿದೆ. 

ಇಬ್ರಾಹಿಂ ರೈಸಿ ಅವರ ಸಾವಿನಿಂದ ತೆರವಾದ ಸ್ಥಾನಕ್ಕೆ ಜೂನ್‌ 28ರಂದು ಚುನಾವಣೆ ನಡೆಯಲಿದೆ. ಅಹ್ಮದಿನೆಜಾದ್‌ ಅವರು ಈ ಹಿಂದೆ 2005 ರಿಂದ 2013ರವರೆಗೆ ಎರಡು ಅವಧಿಗೆ ಅಧ್ಯಕ್ಷರಾಗಿದ್ದರು.

2009ರಲ್ಲಿ ಅವರ ಪುನರಾಯ್ಕೆ ವಿವಾದಕ್ಕೆ ಆಸ್ಪದವಾಗಿತ್ತು. ಈ ಬಗ್ಗೆ ನಡೆದಿದ್ದ ಹಿಂಸಾಚಾರಗಳಲ್ಲಿ 12 ಜನರು ಸತ್ತಿದ್ದು, ಸಾವಿರಾರು ಜನರನ್ನು ವಶಕ್ಕೆ ತೆಗೆದುಕೊಳ್ಳಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT