ದಾಳಿಯನ್ನು ಖಂಡಿಸಿದ ಎಂಡಿಪಿ, ‘ಸಾಂವಿಧಾನಿಕ ಕರ್ತವ್ಯಗಳು ಮತ್ತು ಜವಾಬ್ದಾರಿಗಳನ್ನು ನಿಭಾಯಿಸುವ ಅಧಿಕಾರಿಗಳಿಗೆ ಸರಿಯಾದ ರಕ್ಷಣೆ ನೀಡಲು ಅಧ್ಯಕ್ಷ ಮುಯಿಝು ಆಡಳಿತ ವಿಫಲವಾಗಿದೆ. ಮಾಲ್ದೀವ್ಸ್‌ನಲ್ಲಿ ಸಕ್ರಿಯವಾಗಿರುವ ಕ್ರಿಮಿನಲ್ ಗುಂಪುಗಳೊಂದಿಗೆ ಉನ್ನತ ಸರ್ಕಾರಿ ಅಧಿಕಾರಿಗಳು ಹೊಂದಿರುವ ನಿಕಟ ಸಂಬಂಧಗಳ ಪರಿಣಾಮವಾಗಿ ಉನ್ನತ ಅಧಿಕಾರಿಗಳ ಮೇಲೆ ನಡೆದಿರುವ ಇಂತಹ ನಿರ್ಭೀತ ದಾಳಿಗಳು ನಡೆಯುತ್ತಿವೆ ಎಂಬುದಾಗಿ ಪಕ್ಷವು ಭಾವಿಸಿದೆ. ಅಲ್ಲದೆ, ಸರ್ಕಾರವು ಇಂತಹ ಕ್ರಿಮಿನಲ್‌ಗಳ ಗುಂಪುಗಳಿಗೆ ರಕ್ಷಣೆ ನೀಡುತ್ತಿದೆ’ ಎಂದು ಆರೋಪಿಸಿದೆ.