ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭಾ ಚುನಾವಣೆ | ಮೋದಿಗೆ ಅತಿದೊಡ್ಡ ಗೆಲುವು: ರೊನ್ ಸೋಮರ್ಸ್

Published 25 ಮೇ 2024, 12:50 IST
Last Updated 25 ಮೇ 2024, 12:50 IST
ಅಕ್ಷರ ಗಾತ್ರ

ನ್ಯೂಯಾರ್ಕ್‌: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ‘ಭಾರತದ ಇತಿಹಾಸ ಹಿಂದೆಂದೂ ಕಂಡಿರದ ಅತಿದೊಡ್ಡ ಬಹುಮತದೊಂದಿಗೆ’ ಜಯ ಸಾಧಿಸಲಿದ್ದಾರೆ ಎಂದು ಭಾರತ–ಅಮೆರಿಕ ಸಂಬಂಧಗಳ ತಜ್ಞ ರೊನ್ ಸೋಮರ್ಸ್‌ ಹೇಳಿದ್ದಾರೆ.

ರೊನ್ ಸೋಮರ್ಸ್ ಅವರು ಇಂಡಿಯಾ ಫಸ್ಟ್‌ ಗ್ರೂಪ್‌ನ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ. ಅವರು ಅಮೆರಿಕ–ರಷ್ಯಾ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಕೂಡ ಹೌದು. ‘ಮೋದಿ ಅವರು ಲೋಕಸಭಾ ಚುನಾವಣೆಯಲ್ಲಿ ಭಾರತದ ಇತಿಹಾಸವು ಹಿಂದೆಂದೂ ಕಂಡಿರದಂತಹ ಬಹುಮತದೊಂದಿಗೆ ಜಯ ಸಾಧಿಸಲಿದ್ದಾರೆ ಎಂಬುದು ನನ್ನ ನಂಬಿಕೆ’ ಎಂದು ಸೋಮರ್ಸ್ ಹೇಳಿದ್ದಾರೆ.

ಅಮೆರಿಕದ ನ್ಯೂಯಾರ್ಕ್‌ನಲ್ಲಿ ಇರುವ ಭಾರತದ ಕಾನ್ಸುಲ್ ಜನರಲ್ ಕಚೇರಿ ಆಯೋಜಿಸಿದ್ದ ‘ಅಭಿವೃದ್ಧಿ ಹೊಂದಿದ ಭಾರತ @ 2047’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭಾರತದ ಒಟ್ಟು ಜನಸಂಖ್ಯೆ 140 ಕೋಟಿ, ಈ ಪೈಕಿ 97 ಕೋಟಿ ಮಂದಿ ಮತದಾನದ ಅರ್ಹತೆ ಪಡೆದಿದ್ದಾರೆ ಎಂಬುದನ್ನು ಉಲ್ಲೇಖಿಸಿದ ಸೋಮರ್ಸ್, ‘ಅಮೆರಿಕದಲ್ಲಿ ಮುಕ್ತ ಹಾಗೂ ನ್ಯಾಯಸಮ್ಮತವಾದ ಚುನಾವಣೆ ನಡೆಸಲು ನಮಗೆ ಏಕೆ ಸಾಧ್ಯವಾಗುತ್ತಿಲ್ಲ ಎಂದು ಆಶ್ಚರ್ಯವಾಗುತ್ತದೆ. ಭಾರತದಲ್ಲಿ ಈ ಮಟ್ಟದಲ್ಲಿ ಚುನಾವಣೆ ನಡೆಸಲು ಸಾಧ್ಯವಾಗುವುದಾದರೆ, ಇಲ್ಲಿ ಅಮೆರಿಕದಲ್ಲಿ ಸವಾಲು ಸೃಷ್ಟಿಯಾಗುವುದು ಏಕೆ ಎಂಬುದು ನಿಜಕ್ಕೂ ಅರ್ಥವಾಗುವುದಿಲ್ಲ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT