ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಚೀನಾದ ಐವರ ಹತ್ಯೆ: ಅಫ್ಗಾನಿಸ್ತಾನದಲ್ಲಿ ಯೋಜನೆ’

Published 7 ಮೇ 2024, 16:08 IST
Last Updated 7 ಮೇ 2024, 16:08 IST
ಅಕ್ಷರ ಗಾತ್ರ

ಇಸ್ಲಾಮಾಬಾದ್ (ಪಿಟಿಐ): ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಇದೇ ವರ್ಷದ ಮಾರ್ಚ್ ತಿಂಗಳಿನಲ್ಲಿ ಐವರು ಚೀನಾ ಎಂಜಿನಿಯರ್‌ಗಳ ಸಾವಿಗೆ ಕಾರಣವಾದ ಆತ್ಮಾಹುತಿ ಬಾಂಬ್ ದಾಳಿಯು ಅಫ್ಗಾನಿಸ್ತಾನದಲ್ಲಿ ಯೋಜಿಸಲಾಗಿತ್ತು ಎಂದು ಪಾಕಿಸ್ತಾನ ಸೇನೆ ಮಂಗಳವಾರ ಆರೋಪಿಸಿದೆ. 

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಐಎಸ್‌ಪಿಆರ್ ಮುಖ್ಯಸ್ಥ ಮೇಜರ್ ಜನರಲ್ ಅಹ್ಮದ್ ಷರೀಫ್, ‘ಪಾಕಿಸ್ತಾನದಲ್ಲಿ ದಾಳಿಗಳನ್ನು ನಡೆಸಲು ಉಗ್ರರಿಗೆ ತನ್ನ ನೆಲವನ್ನು ಬಳಸಿಕೊಳ್ಳಲು ಅಫ್ಗಾನಿಸ್ತಾನ ಅವಕಾಶ ಮಾಡಿಕೊಟ್ಟಿದೆ. ಈ ಆತ್ಮಾಹುತಿ ಬಾಂಬ್ ದಾಳಿಯನ್ನು ಅಫ್ಗಾನಿಸ್ತಾನದ ಪ್ರಜೆ ಎಸಗಿದ್ದ‘ ಎಂದು ದೂರಿದರು. 

ಈ ಆತ್ಮಾಹುತಿ ದಾಳಿಯು ಅಫ್ಗಾನಿಸ್ತಾನದ ಗಡಿಯನ್ನು ಸಂಪರ್ಕಿಸುತ್ತದೆ. ಈ ಯೋಜನೆಯನ್ನು ಅಫ್ಗಾನಿಸ್ತಾನದಲ್ಲೇ ರೂಪಿಸಲಾಗಿತ್ತು. ಭಯೋತ್ಪಾದಕರು ಮತ್ತು ಭಯೋತ್ಪಾದಕ ಕೃತ್ಯಗಳಿಗೆ ವ್ಯವಸ್ಥೆ ಕಲ್ಪಿಸುವವರನ್ನು ಅಫ್ಗಾನಿಸ್ತಾನ ನಿಯಂತ್ರಿಸುತ್ತದೆ ಎಂದು ಷರೀಫ್ ಆರೋಪಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT