ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆನಡಾ: ಚಿನ್ನ ದರೋಡೆ ಪ್ರಕರಣ– ಭಾರತ ಮೂಲದ ಇಬ್ಬರ ಬಂಧನ

Published 18 ಏಪ್ರಿಲ್ 2024, 14:02 IST
Last Updated 18 ಏಪ್ರಿಲ್ 2024, 14:02 IST
ಅಕ್ಷರ ಗಾತ್ರ

ಒಟ್ಟಾವ: ಕಳೆದ ವರ್ಷ, ಕೆನಡಾದ ಟೊರಾಂಟೊದ ಪ್ರಮುಖ ವಿಮಾನ ನಿಲ್ದಾಣದಲ್ಲಿ ₹136 ಕೋಟಿ ಮೌಲ್ಯದ ಚಿನ್ನದ ಗಟ್ಟಿಗಳನ್ನು ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಭಾರತ ಮೂಲದ ಇಬ್ಬರು ಸೇರಿ ಆರು ಮಂದಿಯನ್ನು ಬಂಧಿಸಲಾಗಿದೆ ಎಂದು ಅಲ್ಲಿಯ ಪೊಲೀಸರು ತಿಳಿಸಿದ್ದಾರೆ.

ಬಂಧಿತರಲ್ಲಿ ಒಂಟಾರಿಯೊ ನಿವಾಸಿಗಳಾದ ಪರಮ್‌ಪಾಲ್‌ ಸಿಧು (54) ಮತ್ತು ಅಮಿತ್‌ ಜಲೋಟ (40) ಭಾರತ ಮೂಲದವರು. 

ಚಿನ್ನದ ಗಟ್ಟಿಗಳು ಮತ್ತು ವಿದೇಶಿ ಕರೆನ್ಸಿಯನ್ನು ಸ್ವಿಟ್ಜರ್‌ಲೆಂಡ್‌ನ ಜ್ಯೂರಿಕ್‌ನಿಂದ 2023ರ ಏಪ್ರಿಲ್‌ 17ರಂದು ಸರಕು ವಿಮಾನವೊಂದರಲ್ಲಿ ತರಲಾಗಿತ್ತು. ಅವನ್ನು ಭದ್ರತಾ ಕೊಠಡಿಯಲ್ಲಿ ಇರಿಸಲಾಗಿತ್ತು. ನಕಲಿ ಕಾಗದಪತ್ರಗಳನ್ನು ಬಳಿಸಿ ಅವನ್ನೆಲ್ಲ ಲೂಟಿ ಮಾಡಲಾಗಿದೆ. ಕೆನಡಾದ ವಿಮಾನಯಾನ ಸಂಸ್ಥೆ ‘ಏರ್‌ ಕೆನಡಾ’ದ ಕನಿಷ್ಠ ಇಬ್ಬರು ಮಾಜಿ ಸಿಬ್ಬಂದಿ ಈ ದರೋಡೆಗೆ ಸಹಕರಿಸಿದ್ದಾರೆ ಎಂದು ಶಂಕಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT