ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಮೆರಿಕದ ಮತ್ತೊಂದು ಡ್ರೋನ್ ನಾಶ- ಹೂಥಿ ಬಂಡುಕೋರರು

Published 21 ಮೇ 2024, 11:34 IST
Last Updated 21 ಮೇ 2024, 11:34 IST
ಅಕ್ಷರ ಗಾತ್ರ

ಕೈರೊ(ಎಪಿ): ಅಮೆರಿಕದ ಮತ್ತೊಂದು ಡ್ರೋನ್ ಅನ್ನು ಹೊಡೆದುರುಳಿಸಿರುವುದಾಗಿ ಯೆಮನ್‌ನಲ್ಲಿರುವ ಇರಾನ್ ಬೆಂಬಲಿತ ಹೂಥಿ ಬಂಡುಕೋರರು ಮಂಗಳವಾರ ಹೇಳಿದ್ದಾರೆ. ಆದರೆ, ಅಮೆರಿಕದ ಸೇನಾ ಪಡೆಯು ಇದನ್ನು ನಿರಾಕರಿಸಿದೆ.

ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾದ ಕ್ಷಿಪಣಿಯೊಂದರ ಮೂಲಕ ಅಮೆರಿಕದ ಡ್ರೋನ್ ಅನ್ನು ನಾಶಪಡಿಸಲಾಗಿದೆ. ಆದರೆ, ಈ ದಾಳಿಯನ್ನು ಯಾವಾಗ ನಡೆಸಲಾಗಿದೆ ಎಂಬ ಮಾಹಿತಿಯನ್ನು ಹೂಥಿ ಸೇನೆಯ ವಕ್ತಾರರು ಬಹಿರಂಗಪಡಿಸಿಲ್ಲ.

ಕಳೆದ ಶುಕ್ರವಾರ ಅಮೆರಿಕದ ಎಂಕ್ಯೂ–9 ರೀಪರ್ ಡ್ರೋನ್ ಅನ್ನು ಮಾರಿಬ್ ಪ್ರಾಂತ್ಯದಲ್ಲಿ ಹೊಡೆದುರುಳಿಸಿರುವುದಾಗಿ ಹೂಥಿ ಹೇಳಿಕೊಂಡಿತ್ತು. 

ಗಾಜಾ ಮೇಲಿನ ದಾಳಿಯನ್ನು ಇಸ್ರೇಲ್ ನಿಲ್ಲಿಸಬೇಕು ಎಂದು ಒತ್ತಾಯಿಸುತ್ತಿರುವ ಹೂಥಿ ಬಂಡುಕೋರರು, ಕೆಂಪು ಸಮುದ್ರ ಮತ್ತು ಗಲ್ಫ್ ಆಫ್ ಆ್ಯಡನ್‌ನಲ್ಲಿ ಹಡಗುಗಳ ಮೇಲೆ ದಾಳಿಗಳನ್ನು ನಡೆಸುತ್ತಿದ್ದಾರೆ. ಈವರೆಗೆ 50ಕ್ಕೂ ಹೆಚ್ಚು ಹಡಗುಗಳ ಮೇಲೆ ದಾಳಿ ನಡೆಸಿದ್ದು, ಒಂದು ಹಡಗನ್ನು ಜಪ್ತಿ ಮಾಡಿದೆ ಎಂದು ಅಮೆರಿಕದ ಕಡಲ ಆಡಳಿತ ತಿಳಿಸಿದೆ. 

ಹೂಥಿ ಬಂಡುಕೋರರ ದಾಳಿಯ ಬೆದರಿಕೆಯಿಂದಾಗಿ ಕೆಂಪು ಸಮುದ್ರ ಮತ್ತು ಗಲ್ಫ್ ಆಫ್ ಆ್ಯಡನ್‌ನಲ್ಲಿ ಹಡಗುಗಳ ಯಾನ ಗಣನೀಯವಾಗಿ ತಗ್ಗಿದೆ ಎನ್ನಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT