ಸ್ಟಾಕ್ಲೋಹೋಮ್: 2017ನೇಸಾಲಿನ ವೈದ್ಯಶಾಸ್ತ್ರ ವಿಭಾಗದ ನೊಬೆಲ್ ಪ್ರಶಸ್ತಿ ವಿಜೇತರ ಪಟ್ಟಿ ಪ್ರಕಟವಾಗಿದ್ದು, ಅಮೆರಿಕ ಮೂಲದ ಮೂವರು ವಿಜ್ಞಾನಿಗಳು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಜೆಫ್ರೆಯ್ ಹಾಲ್, ಮೈಕೇಲ್ ರೋಸ್ಬಾಶ್ ಮತ್ತು ಮೈಕೇಲ್ ಯಂಗ್ ಈ ಮೂವರು ವಿಜ್ಞಾನಿಗಳು ಈ ವರ್ಷದ ವೈದ್ಯಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಜೀವಿಗಳ ದೈಹಿಕ ಕ್ರಿಯೆ ಕುರಿತಾದ ಸಂಶೋಧನೆಗಾಗಿ ಪ್ರಶಸ್ತಿ ಲಭಿಸಿದೆ. ಈ ಮೂವರು ವಿಜ್ಞಾನಿಗಳ ಸಂಶೋಧನೆಯು ಸಸ್ಯಗಳು, ಪ್ರಾಣಿಗಳು ಹಾಗೂ ಮಾನವರ ದೈಹಿಕ ವ್ಯವಸ್ಥೆ ಹೇಗಿದೆ. ಅದು ಭೂಮಿಯ ಪರಿಭ್ರಮಣದ ವ್ಯವಸ್ಥೆಗೆ ಹೇಗೆ ಹೊಂದಿಕೊಳ್ಳುತ್ತದೆ ಎಂದು ವಿವರಿಸುತ್ತದೆ.
ಪ್ರಶಸ್ತಿಯು ₹7,20,76,890 (9 ಮಿಲಿಯನ್ ಸ್ವೀಡಿಶ್ ಕ್ರೌನ್ಸ್ ) ಮೊತ್ತ ಒಳಗೊಂಡಿದೆ ಎಂದು ಸ್ವೀಡನ್ನಿನ ಕರೋಲಿನ್ಸ್ಕಾ ಸಂಸ್ಥೆ ತಿಳಿಸಿದೆ.
BREAKING NEWS The 2017 #NobelPrize in Physiology or Medicine has been awarded to Jeffrey C. Hall, Michael Rosbash and Michael W. Young. pic.twitter.com/lbwrastcDN